ADVERTISEMENT

ಮಹಾರಾಷ್ಟ್ರ |ಛತ್ರಪತಿ ಶಿವಾಜಿ ಪ್ರತಿಮೆ ಕುಸಿತ: ತನಿಖೆಗೆ ಹೊಸ ಸಮಿತಿ ರಚನೆ

ಪಿಟಿಐ
Published 29 ಆಗಸ್ಟ್ 2024, 2:28 IST
Last Updated 29 ಆಗಸ್ಟ್ 2024, 2:28 IST
<div class="paragraphs"><p>ಮಹಾರಾಷ್ಟ್ರದ&nbsp;ಸಿಂಧುದುರ್ಗ ಜಿಲ್ಲೆಯಲ್ಲಿರುವ ರಾಜ್‌ಕೋಟ್‌ ಕೋಟೆಯಲ್ಲಿ ನಿರ್ಮಿಸಿದ್ದ ಶಿವಾಜಿ ಪ್ರತಿಮೆ </p></div>

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿರುವ ರಾಜ್‌ಕೋಟ್‌ ಕೋಟೆಯಲ್ಲಿ ನಿರ್ಮಿಸಿದ್ದ ಶಿವಾಜಿ ಪ್ರತಿಮೆ

   

ಚಿತ್ರ ಕೃಪೆ: @supriya_sule

ಮುಂಬೈ: ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಕುಸಿತದ ಹಿಂದಿನ ಕಾರಣಗಳನ್ನು ತನಿಖೆ ಮಾಡಲು ಎಂಜಿನಿಯರ್‌ಗಳು, ಐಐಟಿ ತಜ್ಞರು ಮತ್ತು ನೌಕಾಪಡೆಯ ಅಧಿಕಾರಿಗಳನ್ನು ಒಳಗೊಂಡ ತಾಂತ್ರಿಕ ಸಮಿತಿಯನ್ನು ಮಹಾರಾಷ್ಟ್ರ ಸರ್ಕಾರ ರಚಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ADVERTISEMENT

‘ಛತ್ರಪತಿ ಶಿವಾಜಿ ಮಹಾರಾಜರ ವ್ಯಕ್ತಿತ್ವಕ್ಕೆ ತಕ್ಕಂತೆ ಹೊಸ ಪ್ರತಿಮೆಯನ್ನು ನಿರ್ಮಿಸಲು ಸರ್ಕಾರ ಸಮಿತಿಯನ್ನು ರಚಿಸಿದೆ. ಪಕ್ಷದ ಸಚಿವರು, ಅಧಿಕಾರಿಗಳು ಮತ್ತು ನೌಕಾಪಡೆಯ ಅಧಿಕಾರಿಗಳೊಂದಿಗೆ ತಮ್ಮ ನಿವಾಸ ‘ವರ್ಷ’ದಲ್ಲಿ ಸಭೆ ನಡೆಸಿದ ಬಳಿಕ ಸಿಎಂ ಏಕನಾಥ್‌ ಶಿಂಧೆ ಈ ನಿರ್ಧಾರ ಕೈಗೊಂಡಿದ್ದಾರೆ’ ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.

2023ರ ಡಿಸೆಂಬರ್‌ 4ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದ 35 ಅಡಿ ಎತ್ತರದ ಶಿವಾಜಿ ಮಹಾರಾಜರ ಪ್ರತಿಮೆ ಸೋಮವಾರ (ಆಗಸ್ಟ್‌ 26) ಕುಸಿದು ಬಿದ್ದಿತ್ತು. ಘಟನೆ ಸಂಬಂಧ, ಪ್ರತಿಮೆ ನಿರ್ಮಾಣದ ಗುತ್ತಿಗೆದಾರ ಹಾಗೂ ವಿನ್ಯಾಸಗಾರನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.