ಮುಂಬೈ: ನಮ್ಮ ಯೋಧರ ಮೇಲೆ ದಾಳಿ ನಡೆದ ನಂತರನಾವುನಿರ್ದಿಷ್ಟ ದಾಳಿ ಮಾಡಿದ್ದೆವು.ಕೆಲವರು ಕೇಳುತ್ತಾರೆ ನಿರ್ದಿಷ್ಟ ದಾಳಿ ಅಂದರೆ ಏನು? ಸಾಕ್ಷ್ಯ ಎಲ್ಲಿದೆ ಎಂದು? ಅದಕ್ಕೆ ಉತ್ತರವಾಗಿ ನಾನು ಹೇಳುವುದೇನೆಂದರೆ ರಾಹುಲ್ ಗಾಂಧಿಗೆ ಬಾಂಬ್ ಕಟ್ಟಿ ಅವರನ್ನು ಬೇರೆ ದೇಶಕ್ಕೆ ಕಳುಹಿಸಬೇಕಾಗಿತ್ತು.ಹಾಗಾದರೆ ಅವರಿಗೆ ಅದು ಏನೆಂದು ತಿಳಿಯುತ್ತಿತ್ತು ಎಂದಿದ್ದಾರೆ ಬಿಜೆಪಿ ನಾಯಕಿ ಪಂಕಜಾ ಮುಂಡೆ.
ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದಾರೆ ಪಂಕಜಾ ಮುಂಡೆ.
ಸೋಮವಾರ ಇಲ್ಲಿನ ಜಲ್ನಾ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಪಂಕಜಾ, ಹಲವಾರು ಜನ ಸುದ್ದಿಯಾಗುವುದಕ್ಕಾಗಿಯೇ ನಿರ್ದಿಷ್ಟ ದಾಳಿ ಬಗ್ಗೆ ಪ್ರಶ್ನಿಸುತ್ತಾರೆ ಎಂದಿದ್ದಾರೆ.
ವರದಿಗಳ ಪ್ರಕಾರ ಪಂಕಜಾ ಈ ರೀತಿ ಮಾತನಾಡಿದ ರ‍್ಯಾಲಿಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್ ಮತ್ತು ಬಿಜೆಪಿ ರಾಜ್ಯ ಘಟಕ ಮುಖ್ಯಸ್ಥ ದಾನ್ವೆರಾವ್‌ಸಾಬೇಬ್ ದಾದಾರಾವ್ ಕೂಡಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.