ADVERTISEMENT

ಮಹಾರಾಷ್ಟ್ರ: ಚುನಾವಣಾ ಪ್ರಚಾರದ ವೇಳೆ ಕುಸಿದು ಬಿದ್ದ ಪಂಕಜ್ ಮುಂಡೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2019, 5:42 IST
Last Updated 20 ಅಕ್ಟೋಬರ್ 2019, 5:42 IST
   

ಮುಂಬೈ: ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಪಂಕಜ್ ಮುಂಡೆ ಅವರುಬೀಡ್ ಜಿಲ್ಲೆಯ ಪರ್ಲಿಎಂಬಲ್ಲಿ ಶನಿವಾರ ಚುನಾವಣಾ ಪ್ರಚಾರದ ವೇಳೆ ಕುಸಿದು ಬಿದ್ದಿದ್ದಾರೆ.

ಮುಂಡೆ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆಎಂದು ಬಿಜೆಪಿ ವಕ್ತಾರರು ತಿಳಿಸಿದ್ದಾರೆ

ಸೋಮವಾರ ವಿಧಾನಸಭಾ ಚುನಾವಣೆ ನಡೆಯಲಿದೆ.ಪಂಕಜ್ ಮುಂಡೆಯವರು ತಮ್ಮ ಸಂಬಂಧಿ ಎಸಿಪಿ ನಾಯಕ ಧನಂಜಯ ಮುಂಡೆ ವಿರುದ್ಧಪರ್ಲಿ ವಿಧಾಸ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ.

ADVERTISEMENT

ನಿರಂತರ ಐದು ಚುನಾವಣಾರ್‍ಯಾಲಿಗಳಲ್ಲಿ ಭಾಗವಹಿಸಿ ಬಳಲಿದ್ದರು, ಪೆರ್ಲಿಯ ಚುನಾವಣಾವೇದಿಕೆಯಲ್ಲಿ ಭಾಷಣಮಾಡುತ್ತಿರುವಾಗ ಕುಸಿದು ಬಿದ್ದಿದ್ದಾರೆ.ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಬೀಡ್‌ ಲೋಕಸಭಾ ಕ್ಷೇತ್ರದಸಂಸದೆ ಪ್ರೀತಂ ಮುಂಡೆ ಹಾಜರಿದ್ದು ನೆರವಿಗೆ ಧಾವಿಸಿದ್ದಾರೆ.

ಬಿಡುವಿಲ್ಲದ ಚುನಾವಣಾ ಪ್ರಚಾರದಲ್ಲಿ ಅವರು ಬಳಲಿರುವುದಾಗಿ ಬಿಜೆಪಿ ವಕ್ತಾರ ಕೇಶವ್‌ ಉಪಾಧ್ಯಾಯಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.