ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರೀಯ ನಾಟಕ ಶಾಲೆ (ಎನ್‌ಎಸ್‌ಡಿ) ಅಧ್ಯಕ್ಷರಾಗಿ ನಟ ಪರೇಶ್ ರಾವಲ್‌ರನ್ನು(65) ನೇಮಕ ಮಾಡಿದ್ದಾರೆ. ಈ ಕುರಿತು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಟ್ವೀಟ್ ಮಾಡಿದ್ದಾರೆ.
'ಕಲಾವಿದರು ಹಾಗೂ ವಿದ್ಯಾರ್ಥಿಗಳು ಅವರ ಪ್ರತಿಭೆಯ ಲಾಭ ಪಡೆಯಲಿದ್ದಾರೆ' ಎಂದು ಟ್ವೀಟಿಸಿ ಪರೇಶ್ ಅವರಿಗೆ ಶುಭಕೋರಿದ್ದಾರೆ.
ಎನ್‌ಎಸ್‌ಡಿ ಅಧ್ಯಕ್ಷ ಸ್ಥಾನ 2017ರಿಂದ ಖಾಲಿ ಇತ್ತು.
ಪರೇಶ್ ಸಿನಿಮಾ ಜೊತೆಗೆ ರಂಗಭೂಮಿಯ ನಂಟನ್ನೂ ಹೊಂದಿದ್ದಾರೆ. ಅವರ 30ಕ್ಕೂ ಹೆಚ್ಚು ವರ್ಷಗಳ ಸಿನಿಮಾ ಪ್ರಯಾಣದಲ್ಲಿ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿ, ಪದ್ಮಶ್ರೀ ಗೌರವ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. 'ಓಹ್ ಮೈ ಗಾಡ್' ಅವರಿಗೆ ಅತಿ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಸಿನಿಮಾ.
ಪರೇಶ್ ಬಿಜೆಪಿಯಿಂದ ಸಂಸದರೂ ಆಗಿದ್ದರು.
'ನನ್ನ ಮೊದಲ ಪ್ರೀತಿ ಇರುವುದು ರಂಗಭೂಮಿಯಲ್ಲಿ ಹಾಗೂ ರಂಗದ ಮೇಲೆ ನಾನು ಅತ್ಯಂತ ಖುಷಿಯಾಗಿರುವೆ. ನನ್ನ ಮೂಲ ಬೇರುಗಳು ರಂಗಭೂಮಿಯಲ್ಲಿವೆ...' ಎಂದು ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.