ನವದೆಹಲಿ: ಚಳಿಗಾಲದ ಅಧಿವೇಶನದ ಆರನೇ ದಿನವಾದ ಬುಧವಾರವೂ ರಫೇಲ್ ಒಪ್ಪಂದದ ವಿಷಯವಾಗಿ ಸಂಸತ್ತಿನಉಭಯ ಸದನಗಳಲ್ಲಿ ಕಲಾಪಕ್ಕೆ ಅಡ್ಡಿ ಉಂಟಾಯಿತು.
ಟಿಡಿಪಿ, ಎಐಎಡಿಎಂಕೆ ಹಾಗೂ ಡಿಎಂಕೆ ಪಕ್ಷಗಳು ಮೇಕೆದಾಟು ಯೋಜನೆ ಮತ್ತು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಕುರಿತು ಉಭಯ ಸದನಗಳಲ್ಲಿ ಗದ್ದಲ ನಡೆಸಿದರು.
ಲೋಕಸಭೆ ಕಲಾಪವನ್ನು ಮೂರು ಬಾರಿ ಮುಂದೂಡಲಾಯಿತು. ಮಧ್ಯಾಹ್ನ 2ಕ್ಕೆ ಕಲಾಪ ಸೇರಿದಾಗ, ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ ಮಾತ್ರ ಅಂಗೀಕಾರಗೊಂಡಿತು.ಇದಕ್ಕೂಮೊದಲು, ಕೆಲವು ಸದಸ್ಯರು ಮಸೂದೆ ಕುರಿತ ಚರ್ಚೆಯಲ್ಲಿ ಪಾಲ್ಗೊಂಡರು.
ಬಾಡಿಗೆ ತಾಯ್ತನ ವಾಣಿಜ್ಯೀಕರಣಗೊಳ್ಳುವುದನ್ನು ತಡೆಯುವ ಈ ಮಸೂದೆ ಅಡಿಯಲ್ಲಿ, ಮಕ್ಕಳಿಲ್ಲದ ವಿವಾಹಿತ ಭಾರತೀಯ ದಂಪತಿಗೆ ಮಾತ್ರ ನಿರ್ದಿಷ್ಟ ಮಾರ್ಗಸೂಚಿಯಲ್ಲಿ ಬಾಡಿಗೆ ತಾಯಂದಿರ ಮೂಲಕ ಮಕ್ಕಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.