ನವದೆಹಲಿ: ಸಂಸತ್ ಭದ್ರತಾ ಲೋಪ ಪ್ರಕರಣದ ಎಲ್ಲಾ ಆರು ಮಂದಿ ಆರೋಪಿಗಳ ಪೊಲೀಸ್ ಕಸ್ಟಡಿ ಅವಧಿಯನ್ನು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ಮುಂದಿನ ಎಂಟು ದಿನಗಳ ಕಾಲ ವಿಸ್ತರಿಸಿದೆ.
ಇದೇ ವೇಳೆ ಅರೋಪಿಗಳಾದ ಲಲಿತ್ ಝಾ, ಮಹೇಶ್ ಕುಮಾವತ್ ಹಾಗೂ ಅಮೋಲ್ ಶಿಂಧೆ ಸುಳ್ಳುಪತ್ತೆ ಪರೀಕ್ಷೆಗೆ ಅನುಮತಿ ನೀಡಿದ್ದಾರೆ.
ಸಾಗರ್ ಶರ್ಮಾ ಹಾಗೂ ಮೈಸೂರಿನ ಮನೋರಂಜನ್ ಅವರು ಸುಳ್ಳುಪತ್ತೆ, ನಾರ್ಕೋ ಅನಾಲಿಸಿಸ್, ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಅನುಮತಿ ನೀಡಿದ್ದಾರೆ. ಆದರೆ ಸುಳ್ಳುಪತ್ತೆ ಪರೀಕ್ಷೆಗೆ ಅನುಮತಿ ನೀಡಲು ನೀಲಂ ಆಜಾದ್ ನಿರಾಕರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.