ADVERTISEMENT

Parliament Special Session: ನಾಳೆಯಿಂದ ಹೊಸ ಸಂಸತ್‌ ಕಟ್ಟಡದಲ್ಲಿ ಕಲಾಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಸೆಪ್ಟೆಂಬರ್ 2023, 14:55 IST
Last Updated 18 ಸೆಪ್ಟೆಂಬರ್ 2023, 14:55 IST
<div class="paragraphs"><p>ಹೊಸ ಹಾಗೂ ಹಳೆಯ ಸಂಸತ್ ಭವನ</p></div>

ಹೊಸ ಹಾಗೂ ಹಳೆಯ ಸಂಸತ್ ಭವನ

   

ರಾಯಿಟರ್ಸ್ ಚಿತ್ರ

ನವದೆಹಲಿ: ಸಂಸತ್ತಿನ ವಿಶೇಷ ಅಧಿವೇಶನ ಇಂದಿನಿಂದ (ಸೋಮವಾರ) ಆರಂಭವಾಗಿದ್ದು, ಭಾರತದ 75 ವರ್ಷಗಳ ಪ್ರಜಾಪ್ರಭುತ್ವದ ಪಯಣದ ಬಗ್ಗೆ ಮೊದಲ ದಿನ ಚರ್ಚೆಗಳು ನಡೆದವು.

ADVERTISEMENT

ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಚರ್ಚೆಗೆ ನಾಂದಿ ಹಾಡಿದರು. ಬಳಿಕ ಹಲವು ಸಂಸದರ ಮಾತನಾಡಿದರು. ಮಾಜಿ ಪ್ರಧಾನಿ ಹಾಗೂ ಸಂಸದರ ಕೊಡುಗೆಗಳನ್ನು ಸದಸ್ಯರು ಕೊಂಡಾಡಿದರು.

ಸಂಜೆ ಉಭಯ ಸದನಗಳನ್ನು ನಾಳೆಗೆ ಮುಂದೂಡಲಾಯಿತು. ನಾಳೆಯಿಂದ ಹೊಸ ಸಂಸತ್‌ ಕಟ್ಟಡದಲ್ಲಿ ಕಲಾಪಗಳು ನಡೆಯಲಿವೆ.

ನಾಳೆ ಮಧ್ಯಾಹ್ನ 1.15ಕ್ಕೆ ಲೋಕಸಭೆಯ ಕಲಾಪಗಳು ಆರಂಭಗೊಳ್ಳಲಿವೆ. ರಾಜ್ಯಸಭೆ ಕಲಾಪಗಳು ಮಧ್ಯಾಹ್ನ 2.15ಕ್ಕೆ ಶುರುವಾಗಲಿದೆ

ನೆಹರೂರನ್ನು ಸ್ಮರಿಸಿದ ಮೋದಿ

ಸಂಸತ್ತಿನ ವಿಶೇಷ ಅಧಿವೇಶನದ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಜವಹರ್‌ಲಾಲ್‌ ನೆಹರೂ ಅವರನ್ನು ಸ್ಮರಿಸಿದ್ದಾರೆ.

ಜವಾಹರಲಾಲ್ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಪಿ.ವಿ. ನರಸಿಂಹರಾವ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರು ಹೊಂದಿದ್ದ ದೂರದೃಷ್ಟಿಯನ್ನು ಪ್ರಧಾನಿ ಶ್ಲಾಘಿಸಿದ್ದಾರೆ.

ಸಂಸತ್ತಿನ ವಿಶೇಷ ಅಧಿವೇಶನ ಇಂದು ಆರಂಭವಾಗಿದ್ದು, ಐದು ದಿನಗಳ ಕಾಲ ನಡೆಯುತ್ತಿದೆ. ‘ಸಂಸತ್‌ನ 75 ವರ್ಷಗಳ ಪಯಣ’ ಕುರಿತು ಉಭಯ ಸದನಗಳಲ್ಲಿ ಚರ್ಚೆ ನಡೆಯುತ್ತಿದೆ. ವಿಧಾನಸಭಾದಿಂದ ಸಂಸತ್‌ವರೆಗೆ ನಡೆದು ಬಂದು ಸಂಸದೀಯ ಹಾದಿಯಲ್ಲಿನ ಸಾಧನೆಗಳು, ಅನುಭವಗಳು, ನೆನಪುಗಳು ಮತ್ತು ಕಲಿಕೆ ಬಗ್ಗೆ ಚರ್ಚೆ ನಡೆದಿದೆ.

ಸಂಸತ್ತಿನಲ್ಲಿ ಮಾಜಿ ಪ್ರಧಾನಿ ನೆಹರೂ ಅವರ ಮಧ್ಯರಾತ್ರಿಯ ಭಾಷಣ ಈಗಲೂ ಪ್ರತಿಧ್ವನಿಸುತ್ತದೆ. ಅದು ನಮಗೆ ಈಗಲೂ ಸ್ಪೂರ್ತಿ ನೀಡುತ್ತಲೇ ಇದೆ ಎಂದು ಪ್ರಧಾನಿ ಮೋದಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.