ADVERTISEMENT

ಸಂಸತ್‌ ಭವನದ ಫೋಟೊ, ವಿಡಿಯೊ ತೆಗೆಯದಂತೆ ಎಚ್ಚರಿಕೆ

ಪಿಟಿಐ
Published 23 ಜನವರಿ 2024, 15:55 IST
Last Updated 23 ಜನವರಿ 2024, 15:55 IST
<div class="paragraphs"><p>ನೂತನ ಸಂಸತ್‌ ಭವನ ಕಟ್ಟಡ</p></div>

ನೂತನ ಸಂಸತ್‌ ಭವನ ಕಟ್ಟಡ

   

–ಪಿಟಿಐ ಚಿತ್ರ

ನವದೆಹಲಿ: ಭದ್ರತೆಗೆ ಸಂಬಂಧಿಸಿದ ಶಿಷ್ಟಾಚಾರದ ಪ್ರಕಾರ, ಸಂಸತ್ ಭವನದಲ್ಲಿ ಫೋಟೊ, ವಿಡಿಯೊ ತೆಗೆಯವುದನ್ನು ನಿಷೇಧಿಸಲಾಗಿದ್ದು, ನಿಯಮ ಮೀರದಂತೆ ಸಂಸತ್ ಸಿಬ್ಬಂದಿಗೆ ಎಚ್ಚರಿಕೆ ನೀಡಲಾಗಿದೆ.

ADVERTISEMENT

ಪದೇ ಪದೇ ಸೂಚನೆ ನೀಡಿದರೂ ಸಂಸತ್‌ನ ಕೆಲವು ಅಧಿಕಾರಿಗಳು ಶಿಷ್ಟಾಚಾರ ಪಾಲಿಸುತ್ತಿಲ್ಲ ಎಂದು ಸಂಸತ್‌ನ ಜಂಟಿ ಕಾರ್ಯದರ್ಶಿ (ಭದ್ರತೆ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತದಲ್ಲಿ ಸಂಸತ್ ಭವನವು ಅತಿ ಹೆಚ್ಚು ಬೆದರಿಕೆಗಳಿಗೆ ಗುರಿಯಾಗಿರುವ ಸ್ಥಳವಾಗಿದ್ದು, ಫೋಟೊ ತೆಗೆಯುವುದು ಮತ್ತು ವಿಡಿಯೊ ಮಾಡುವುದು ಯೋಜಿತ ಭದ್ರತಾ ವ್ಯವಸ್ಥೆಯ ಕಾರ್ಯತಂತ್ರದ ಭಾಗವಾಗಿದೆ ಎಂದು ಜನವರಿ 19ರಂದು ಅವರು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ಯಾಮೆರಾ, ರಹಸ್ಯ ಕ್ಯಾಮೆರಾ ಮತ್ತು ಸ್ಮಾರ್ಟ್‌ಫೋನ್‌ಗಳು ಭವನದ ರಕ್ಷಣೆಗೆ ಕಂಟಕವಾಗಿದ್ದು, ರಾಜ್ಯಸಭೆ ಮತ್ತು ಲೋಕಸಭೆ ಸಚಿವಾಲಯದ ಎಲ್ಲ ಅಧಿಕಾರಿಗಳು, ಸಂಸದೀಯ ವ್ಯವಹಾರಗಳ ಸಚಿವಾಲಯ ಮತ್ತು ಸಂಸತ್‌ನೊಳಗೆ ಕೆಲಸ ಮಾಡುವ ಇತರ ಏಜೆನ್ಸಿಗಳ ಸಿಬ್ಬಂದಿಗೆ ಸಂಸತ್ತಿನಲ್ಲಿ ಯಾವುದೇ ರೀತಿಯ ಛಾಯಾಗ್ರಹಣವನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ತಿಳಿಸಲಾಗಿದೆ.        

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.