ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನಆರಂಭವಾಗುವಮುನ್ನ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಇದು ಮಹತ್ವದಕ್ಷಣಮತ್ತು ಇದುವೇಭಾರತವನ್ನು ಮುಂದೆ ಕರೆದೊಯ್ಯಲಿದೆ ಎಂದಿದ್ದಾರೆ.
ದೇಶದಲ್ಲಿ ಆರ್ಥಿಕ ಹಿಂಜರಿತ, ರೈತರ ಸಂಕಷ್ಟ ಮತ್ತು ಕಾಶ್ಮೀರದಲ್ಲಿನ ರಾಜಕೀಯ ಪರಿಸ್ಥಿತಿ ಬಗ್ಗೆ ವಿಪಕ್ಷಗಳು ಸಂಸತ್ತಿನಲ್ಲಿ ಪ್ರಶ್ನಿಸಲಿವೆ. ಈ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಾವು ಸಿದ್ಧರಾಗಿದ್ದೇವೆ ಎಂದು ಮೋದಿ ಹೇಳಿದ್ದಾರೆ.
ಕಳೆದ ಕೆಲವು ದಿನಗಳಲ್ಲಿಎಲ್ಲ ರಾಜಕೀಯ ಪಕ್ಷಗಳ ನಾಯಕರನ್ನು ಭೇಟಿ ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಕಳೆದ ಅಧಿವೇಶನದಲ್ಲಿ ಎಲ್ಲ ಸಂಸದರು ಸಕ್ರಿಯವಾಗಿ ಭಾಗವಹಿಸಿದ್ದರು. ಇದು ಸರ್ಕಾರದ ಸಾಧನೆ ಮಾತ್ರ ಅಲ್ಲ ಇಡೀ ಸಂಸತ್ತಿನ ಸಾಧನೆ. ಎಲ್ಲ ಸಮಸ್ಯೆಗಳ ಬಗ್ಗೆ ನಾವು ಮುಕ್ತವಾಗಿ ಚರ್ಚಿಸಲಿದ್ದೇವೆ. ಇಲ್ಲಿ ಪ್ರಧಾನವಾದ ಮತ್ತು ಗುಣಮಟ್ಟದ ಚರ್ಚೆ, ಸಂವಾದಗಳು ನಡೆಯಬೇಕು. ಸಂಸತ್ತಿನಲ್ಲಿ ನಡೆಯುವ ಚರ್ಚೆಯಲ್ಲಿ ಎಲ್ಲರೂ ಭಾಗಿಯಾಗಬೇಕು.
ಇದು 2019ರ ಕೊನೆಯ ಅಧಿವೇಶನ.1952ರ ಮೇ 13ರಂದು ಮೊದಲ ಅಧಿವೇಶನ ನಡೆಸಿದ್ದ ರಾಜ್ಯಸಭೆಗೆ, ಸೋಮವಾರದಿಂದ ಆರಂಭವಾಗುತ್ತಿರುವ ಅಧಿವೇಶನವು 250ನೇ ಅಧಿವೇಶನವಾಗಿದೆ. ಈ ಅಧಿವೇಶನದ ನಡುವೆ ಜನವರಿ 26 ಗಣರಾಜ್ಯೋತ್ಸವವೂ ಬರುತ್ತದೆ. ನಮ್ಮ ಸಂವಿಧಾನ 70 ವರ್ಷಗಳನ್ನು ಪೂರೈಸುತ್ತಿದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಇದನ್ನೂಓದಿ:ಮೇಲ್ಮನೆ: 250 ಅಧಿವೇಶನದ ಮೆರುಗು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.