ನವದೆಹಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ನೀಡಿದ್ದ ಎಸ್‌ಪಿಜಿ ಭದ್ರತೆಯನ್ನು ರದ್ದುಪಡಿಸಿದ ವಿಚಾರವು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಯಾಗಿದೆ.
ಹಾಸ್ಟೆಲ್ ಶುಲ್ಕ ಏರಿಕೆ ಮಾಡಿದ್ದನ್ನು ಖಂಡಿಸಿಜೆಎನ್‌ಯು ವಿದ್ಯಾರ್ಥಿಗಳು ಪ್ರತಿಭಟಿಸುತ್ತಿರುವ ಬಗ್ಗೆ ಸಿಪಿಐ ಸದಸ್ಯ ಬಿನೋಯ್ ವಿಶ್ವಂ ರಾಜ್ಯಸಭೆಯ ಗಮನ ಸೆಳೆದಿದ್ದಾರೆ.
ಅಧಿವೇಶನ ಎರಡನೇ ದಿನ ಚಿಟ್ ಫಂಟ್ ಕಾಯ್ದೆ1982 (ತಿದ್ದುಪಡಿ) ಅಂಗೀಕಾರಕ್ಕಾಗಿಲೋಕಸಭೆಯ ಮುಂದಿಡಲಾಗಿದೆ. ರಾಜ್ಯಸಭೆಯಲ್ಲಿ ಆರೋಗ್ಯ ಸಚಿವ ಹರ್ಷ ವರ್ಧನ್ ಅವರು ಬಾಡಿಗೆ ತಾಯಿ (ನಿಯಂತ್ರಣ) ಮಸೂದೆ 2019ನ್ನು ಮಂಡಿಸಲಿದ್ದಾರೆ. ಈ ಮಸೂದೆ ಬಾಡಿಗೆ ತಾಯ್ತನದ ವ್ಯಾವಹಾರಿಕ ಬಳಕೆಯನ್ನು ನಿಷೇಧಿಸುವುದಾಗಿದೆ. ಪ್ರಸ್ತುತ ಮಸೂದೆ ಲೋಕಸಭೆಯ ಮಳೆಗಾಲದ ಅಧಿವೇಶನದಲ್ಲಿ ಅಂಗೀಕರಿಸಲ್ಪಟ್ಟಿತ್ತು.
ಇದನ್ನೂ ಓದಿ:ಚಳಿಗಾಲದ ಅಧಿವೇಶನ: ಬಿಸಿಯೇರಿಸಿದ ಚರ್ಚೆ
ಕ್ಷಣಕ್ಷಣದ ಅಪ್‌ಡೇಟ್
11: 49- ಲೋಕಸಭೆಯ ಅಂಗಣಕ್ಕಿಳಿಯಬೇಡಿ ಎಂದ ಸ್ಪೀಕರ್
ರೈತರ ಸಮಸ್ಯೆ ಬಗ್ಗೆದನಿಯೆತ್ತಿದ ವಿಪಕ್ಷಗಳು ಲೋಕಸಭೆ ಕಲಾಪ ವೇಳೆ ಘೋಷಣೆ ಕೂಗಿವೆ. ನಮಗೆ ನ್ಯಾಯಬೇಕು , ಉತ್ತರ ಕೊಡಿ ಎಂದು ಘೋಷಣೆ ಕೂಗುತ್ತಾ ವಿಪಕ್ಷ ಸದಸ್ಯರು ಎದ್ದು ನಿಂತಾಗ ಸದನದ ಅಂಗಣಕ್ಕೆ ಇಳಿಯಬೇಡಿ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪೀಕರ್ ಎಚ್ಚರಿಕೆ ನೀಡಿದ್ದಾರೆ.
11:34- ಅಧಿಕಾರ ಶಾಹಿ ನಿಲ್ಲಿಸಿ, ನ್ಯಾಯಬೇಕು ಎಂದು ಕೂಗಿದ ವಿಪಕ್ಷ, ಗದ್ದಲದ ನಡುವೆಯೇ ಕಲಾಪ ಮುಂದುವರಿಸಿದ ಸ್ಪೀಕರ್ ಓಂ ಬಿರ್ಲಾ
11:17 - ರಾಜ್ಯಸಭಾ ಮಾರ್ಷಲ್‌ಗಳ ಡ್ರೆಸ್ ಕೋಡ್ ಬಗ್ಗೆ ಮರುಪರಿಶೀಲನೆ ನಡೆಸುವಂತೆ ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ರಾಜ್ಯಸಭಾ ಕಾರ್ಯದರ್ಶಿಗೆ ಹೇಳಿದ್ದಾರೆ.
11: 11- ಗದ್ದಲವುಂಟಾದ ಕಾರಣ ರಾಜ್ಯಸಭಾ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿದೆ
11:03- ನುಮಾಲಿಗಢ ರಿಫೈನರೀಸ್ ಖಾಸಗೀಕರಣ ವಿರುದ್ಧ ಅಸ್ಸಾಂನ ಕಾಂಗ್ರೆಸ್ ಸಂಸದರು ಸಂಸತ್ತಿನ ಆವರಣದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
10.53-ರಾಜ್ಯಸಭಾ ಸಂಸದರಾದ ಆರ್‌ಕೆ ಸಿನ್ಹಾ, ವಿಜಯ್ ಗೋಯಲ್, ಕೆಟಿಎಸ್ ತುಳಸಿ, ಜಿವಿಎಲ್ ನರಸಿಂಹ ರಾವ್ ಮತ್ತು ನರೇಂದ್ರ ಜಾಧವ್ ಅವರು ದೇಶದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯ ಬಗ್ಗೆ ಶೂನ್ಯ ವೇಳೆ ನೋಟಿಸ್ ನೀಡಿದ್ದಾರೆ.
10.40- ಆರ್‌ಎಸ್‌ಪಿಸಿ, ಐಯುಎಂಎನ್ ಮತ್ತು ತೃಣಮೂಲ ಕಾಂಗ್ರೆಸ್ ಸದಸ್ಯರು ಜೆಎನ್‌ಯು ವಿಷಯದ ಬಗ್ಗೆ ನಿಲುವಳಿ ಸೂಚನೆ ಮಂಡಿಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.