ADVERTISEMENT

ರಫೇಲ್ ಒಪ್ಪಂದದಲ್ಲಿ ತಮ್ಮ ಪಾತ್ರ ನಿರಾಕರಿಸಿದ ಪರ್ರೀಕರ್: ರಾಹುಲ್‌

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 6:44 IST
Last Updated 30 ಜನವರಿ 2019, 6:44 IST
   

ಕೊಚ್ಚಿ: ಮಾಜಿ ರಕ್ಷಣ ಸಚಿವ ಹಾಗೂ ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರೀಕರ್ರಫೇಲ್ ಒಪ್ಪಂದ ಪ್ರಕರಣದಲ್ಲಿನ ತಮ್ಮ ಪಾತ್ರವನ್ನು ನಿರಾಕರಿಸಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಅನಿಲ್‌ ಅಂಬಾನಿ ಅವರಿಗೆ ಅನುಕೂಲ ಮಾಡಿಕೊಡುವ ಹೊಸ ರಫೇಲ್‌ ಒಪ್ಪಂದದಲ್ಲಿಮಾಜಿ ರಕ್ಷಣ ಸಚಿವರು ತಮ್ಮ ಪಾತ್ರವೇನೂಇಲ್ಲ ಎಂದು ತಿಳಿಸಿದ್ದಾರೆ ಎಂದು ರಾಹುಲ್ ಗಾಂಧಿಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ಗೋವಾಗೆ ಭೇಟಿ ನೀಡಿದ್ದ ರಾಹುಲ್‌ ಗಾಂಧಿ ಮುಖ್ಯಮಂತ್ರಿ ಮನೋಹರ್ಪರ್ರೀಕರ್ ಅವರನ್ನು ಭೇಟಿ ಮಾಡಿದ ಕೆಲವೇ ಗಂಟೆಗಳ ಬಳಿಕ ಈ ಹೇಳಿಕೆ ನೀಡಿದ್ದಾರೆ. ಕೊಚ್ಚಿಯಲ್ಲಿ ಬೂತ್‌ ಮಟ್ಟದ ಕಾಂಗ್ರೆಸ್‌ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಕಳೆದ ಸೋಮವಾರ ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಮನೋಹರ್‌ ಪರ್ರೀಕರ್ ವಿರುದ್ಧ ಮಾಡಿದ್ದ ಆರೋಪಕ್ಕೆ ರಾಹುಲ್‌ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ.

ADVERTISEMENT

‘ರಫೇಲ್ ಒಪ್ಪಂದಕ್ಕೆ ಸಂಬಂಧಿಸಿದ ಆಡಿಯೊ ಟೇಪ್ ಬಹಿರಂಗವಾಗಿ ಮೂವತ್ತು ದಿನಗಳಾಗಿವೆ. ಯಾವುದೇ ಎಫ್‌ಐಆರ್ ದಾಖಲಾಗಿಲ್ಲ, ತನಿಖೆಗೂ ಆದೇಶಿಸಲಾಗಿಲ್ಲ. ಸಚಿವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಆಡಿಯೊ ಟೇಪ್ ಅಧಿಕೃತವೆಂಬುದು ದೃಢ. ರಫೇಲ್‌ನ ರಹಸ್ಯ ದಾಖಲೆಗಳು ಪರ್‍ರೀಕರ್ ಬಳಿ ಇದ್ದು ಅದು ಅವರಿಗೆ ಪ್ರಧಾನಿಯವರಿಗಿಂತಲೂ ಹೆಚ್ಚಿನ ಅಧಿಕಾರ ನೀಡಿದೆ’ ಎಂದು ರಾಹುಲ್ ಗಾಂಧಿ ಸೋಮವಾರ ಟ್ವೀಟ್ ಮಾಡಿದ್ದರು.

ಮರುದಿನವೇ ಗೋವಾಗೆ ಆಗಮಿಸಿದ್ದ ರಾಹುಲ್‌ ಗಾಂಧಿ ಮುಖ್ಯಮಂತ್ರಿ ಮನೋಹರ್ ಪರ್ರೀಕರ್ ಅವರನ್ನು ಭೇಟಿ ಮಾಡಿದ್ದರು. ಈ ಬಗ್ಗೆ ಟ್ವೀಟ್ ಮಾಡಿದ್ದ ರಾಹುಲ್‌ ಗಾಂಧಿ, ‘ಬೇಗನೆ ಗುಣಮುಖರಾಗುವಂತೆ ಹಾರೈಸಲು ಇವತ್ತು ಬೆಳಿಗ್ಗೆ ಗೋವಾ ಮುಖ್ಯಮಂತ್ರಿ ಮನೋಹರ್ ಪರ್‍ರೀಕರ್ ಅವರನ್ನು ಭೇಟಿಯಾದೆ. ಇದು ಖಾಸಗಿ ಭೇಟಿ’ ಎಂದು ರಾಹುಲ್ ಗಾಂಧಿ ಟ್ವೀಟ್‌ ರಾಹುಲ್ ಹೇಳಿದ್ದರು.

ಕೊಚ್ಚಿಯಲ್ಲಿ ರಫೇಲ್‌ ಒಪ್ಪಂದದ ಬಗ್ಗೆ ಮಾತನಾಡಿದ ರಾಹುಲ್‌ ಗಾಂಧಿ, ’ಜನರ ₹ 30 ಸಾವಿರ ಕೋಟಿ ರೂಪಾಯಿಗಳನ್ನು ತನ್ನ ಗೆಳೆಯ ಅನಿಲ್‌ ಅಂಬಾನಿಗೆ ನೀಡಿದ್ದಾರೆ ಎಂದು ಆರೋಪಿಸಿದರು. ₹526 ಕೋಟಿ ಮೊತ್ತದ ವಿಮಾನದ ಬೆಲೆಯನ್ನು ₹1.600 ಕೋಟಿಗೆ ಏರಿಕೆ ಮಾಡಿದ್ದು ಯಾಕೆ ?ಈ ಪ್ರಶ್ನೆಗೆ ದೇಶದ ಯುವ ಜನರು ಮತ್ತು ಕೇರಳದ ಯುವಜನತೆ ಉತ್ತರ ಕೇಳುತ್ತಿದ್ದಾರೆ? ಆ ಉತ್ತರ ಈ ದೇಶದ ಪ್ರಧಾನಿ ಭ್ರಷ್ಟ ಎಂದು ರಾಹುಲ್‌ ಹೇಳಿದರು.

ಪ್ರಧಾನಿ ತಮ್ಮ ರಕ್ಷಣೆಗಾಗಿ ಸಿಬಿಐ ನಿರ್ದೇಶಕರನ್ನು ವಜಾ ಮಾಡುತ್ತಾರೆ ಎಂದು ರಾಹುಲ್‌ ಆರೋಪಿಸಿದರು. ರಫೇಲ್‌ ಒಪ್ಪಂದದ ಗುತ್ತಿಗೆಯನ್ನು ಅನಿಲ್‌ ಅಂಬಾನಿಗೆ ನೀಡುವಂತೆ ಫ್ರಾನ್ಸ್‌ ಮಾಜಿ ಅಧ್ಯಕ್ಷರು ಮಾಧ್ಯಮಗಳಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಯುದ್ಧ ವಿಮಾನ ತಯಾರಿಕೆಯಲ್ಲಿ 70 ವರ್ಷ ಅನುಭವ ಇರುವ ಎಚ್‌ಎಎಲ್‌ಗೆ ನೀಡದೇ ಇದರ ಬಗ್ಗೆ ಯಾವುದೇ ಅನುಭವ ಹೊಂದಿರದ ಅನಿಲ್‌ ಅಂಬಾನಿ ಕಂಪೆನಿಗೆ ನೀಡಿದ್ದು ಯಾಕೆ ಎಂದು ರಾಹುಲ್‌ ಪ್ರಶ್ನೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.