ADVERTISEMENT

ಧಾರಾಕಾರ ಮಳೆ: ರಾಜ್‌ಕೋಟ್‌ ವಿಮಾನ ನಿಲ್ದಾಣದ ಚಾವಣಿ ಕುಸಿತ

ಪಿಟಿಐ
Published 29 ಜೂನ್ 2024, 15:55 IST
Last Updated 29 ಜೂನ್ 2024, 15:55 IST
<div class="paragraphs"><p>ರಾಜ್‌ಕೋಟ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಚಾವಣಿ ಕುಸಿದುಬಿದ್ದಿದೆ</p></div>

ರಾಜ್‌ಕೋಟ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಚಾವಣಿ ಕುಸಿದುಬಿದ್ದಿದೆ

   

-ಪಿಟಿಐ ಚಿತ್ರ

ರಾಜ್‌ಕೋಟ್‌: ಭಾರಿ ಮಳೆಯಿಂದಾಗಿ ರಾಜ್‌ಕೋಟ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರ ಪಿಕಪ್‌ ಮತ್ತು ಡ್ರಾಪ್‌ ಪ್ರದೇಶದಲ್ಲಿದ್ದ ಚಾವಣಿ ಶನಿವಾರ ಕುಸಿದುಬಿದ್ದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಘಟನೆಯಿಂದ ಯಾವುದೇ ಹಾನಿಯಾಗಿಲ್ಲ ಎಂದು ಹೇಳಿದ್ದಾರೆ.

ಭಾರಿ ಮಳೆಯಿಂದಾಗಿ ಫ್ಯಾಬ್ರಿಕ್‌ ಚಾವಣಿಯಲ್ಲಿ ನೀರು ನಿಂತಿತ್ತು. ಇದರಿಂದಾಗಿ ಕುಸಿದುಬಿದ್ದಿದೆ. ಹಾನಿಗೊಳಗಾಗದ ಚಾವಣಿಯನ್ನು ಸಿಬ್ಬಂದಿ ತೆರವು ಮಾಡಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ‘ಎಕ್ಸ್’ ಮೂಲಕ ತಿಳಿಸಿದ್ದಾರೆ.

ಘಟನೆ ಬೆನ್ನಲ್ಲೇ ವಿರೋಧ ಪಕ್ಷ ಕಾಂಗ್ರೆಸ್‌, ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.  

‘ಪ್ರಧಾನಿ ನರೇಂದ್ರ ಮೋದಿ ಅವರು 11 ತಿಂಗಳ ಹಿಂದಷ್ಟೆ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದರು’ ಎಂದು ಗುಜರಾತ್‌ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಶಕ್ತಿ ಸಿನ್ಹಾ ಗೋಹಿಲ್‌ ಟೀಕಿಸಿದ್ದಾರೆ.

 ‘11 ತಿಂಗಳಲ್ಲಿ ಚಾವಣಿ ಕುಸಿದಿದೆ. ಭ್ರಷ್ಟಾಚಾರ ಯಾವ ಪ್ರಮಾಣದಲ್ಲಿದೆ ಎಂಬುದಕ್ಕೆ ಇದೇ ಸಾಕ್ಷಿ. ಘಟನೆ ವೇಳೆ ಚಾವಣಿಯ ಕೆಳಗೆ ಯಾರೂ ಇರದ ಕಾರಣ ಅನಾಹುತ ತಪ್ಪಿದೆ. ಜನರ ಜೀವಕ್ಕೆ ಅಪಾಯವಾಗಿದ್ದರೆ ಅದಕ್ಕೆ ಹೊಣೆ ಯಾರು’ ಎಂದು ಪ್ರಶ್ನಿಸಿದ್ದಾರೆ.

ದೆಹಲಿ ಮತ್ತು ಜಬಲ್‌ಪುರದಲ್ಲಿ ವಿಮಾನ ನಿಲ್ದಾಣಗಳಲ್ಲಿಯೂ ಇತ್ತೀಚೆಗೆ ಇಂಥದ್ದೇ ಘಟನೆಗಳು ನಡೆದಿವೆ. ದೆಹಲಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ನಡೆದ ದುರಂತದಲ್ಲಿ ಕಾರು ಚಾಲಕರೊಬ್ಬರು ಮೃತಪಟ್ಟಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.