ಮುಂಬೈ: ಏರ್ ಇಂಡಿಯಾ ವಿಮಾನದಲ್ಲಿಪ್ರಯಾಣಿಕರೊಬ್ಬರು ತಿಗಣೆ ಕಚ್ಚಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯ ಬಿಟ್ಟಿದ್ದಾರೆ. ಕಳೆದೊಂದು ವಾರದಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ತಿಗಣೆ ಕಚ್ಚಿರುವ ಎರಡನೇಯ ಪ್ರಕರಣ ಇದಾಗಿದೆ.
ಮುಂಬೈನ ಸೌಮ್ಯ ಶೆಟ್ಟಿ ಎಂಬುವರು ತಿಗಣೆ ಕಚ್ಚಿರುವ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ನ್ಯೂಯಾರ್ಕ್‌ನಿಂದ ಮುಂಬೈಗೆ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಸೌಮ್ಯ ಶೆಟ್ಟಿ ತನ್ನ ಮೂವರು ಮಕ್ಕಳೊಂದಿಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಅವರ ಎಡ ಕೈಗೆ ತಿಗಣೆಗಳು ಕಚ್ಚಿವೆ. ತಿಗಣೆಗಳು ಇರುವ ಬಗ್ಗೆ ಸಿಬ್ಬಂದಿಗಳ ಗಮನಕ್ಕೆ ತಂದು, ಸೀಟು ಬದಲಾವಣೆ ಮಾಡಿಕೊಡುವಂತೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ, ಮುಂಬೈ ಸಮೀಪಿಸುತ್ತಿದ್ದಂತೆ ಸಿಬ್ಬಂದಿಗಳು ಸೀಟು ಬದಲಾವಣೆ ಮಾಡಿಕೊಟ್ಟರು ಎಂದು ಸೌಮ್ಯ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
ತಾವು ಮಾಡಿದ ಟ್ವೀಟ್ ಅನ್ನು ಏರ್ ಇಂಡಿಯಾ ಸೇರಿಂದಂತೆ ಕೆಲವು ಮಾಧ್ಯಮಗಳಿಗೆ ಟ್ಯಾಗ್ ಮಾಡಿದ್ದಾರೆ.
ಏರ್ ಇಂಡಿಯಾ ವಿಮಾನದಲ್ಲಿ ತಿಗಣೆಗಳು ಇರುವೆ ಬಗ್ಗೆ ಪ್ರವೀಣ್ ತೊನೆಸ್ಕರ್ ಎಂಬುವರು ಟ್ವೀಟ್ ಮಾಡಿದ್ದಾರೆ. ನಾವು ನ್ಯೂಯಾರ್ಕ್‌ನಿಂದ ಮುಂಬೈಗೆ ಬ್ಯುಸಿನೆಸ್ ಕ್ಲಾಸಿನಲ್ಲಿ ಬಂದಿದ್ದೆವು. ನಾವು ಕುಳಿತ ಸೀಟಿನಲ್ಲಿ ತಿಗಣೆಗಳು ಮೆತ್ತಿಕೊಂಡಿದ್ದವು, ಸಾಮಾನ್ಯವಾಗಿ ರೈಲುಗಳಲ್ಲಿ ತಿಗಣೆಗಳು ಹೆಚ್ಚಿರುತ್ತವೆ ಎಂಬುದನ್ನು ಕೇಳಿದ್ದೆವು ಆದರೆ ಬ್ಯಸಿನೆಸ್ ಕ್ಲಾಸಿನ ’ಮಹಾರಾಜ’ ವಿಮಾನದಲ್ಲಿ ತಿಗಣೆಗಳ ಕಾಟವೇ ಎಂದು ಪ್ರವೀಣ್ ಟ್ವೀಟ್ ಮಾಡಿದ್ದರು.
ಪ್ರಯಾಣದ ಅರ್ಧ ದಾರಿಯಲ್ಲೇ ನನ್ನ ಪತ್ನಿ ಮತ್ತು ಮಗಳು ಸೀಟ್ ಬದಲಾಯಿಸಿಕೊಂಡು ಎಕಾನಮಿ ಕ್ಲಾಸಿನಲ್ಲಿ ಕುಳಿತರು. ಅವರು ಕುಳಿತ್ತಿದ್ದ ಸೀಟಿನ ಟೇಬಲ್ ಮುರಿದಿತ್ತು ಹಾಗೂ ಟಿ.ವಿ ಕೂಡ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ ಎಂದು ಪ್ರವೀಣ್ ದೂರಿದ್ದರು.
ದೂರಿನ ಬಗ್ಗೆ ಏರ್ ಇಂಡಿಯಾ ಪ್ರವೀಣ್ ಅವರಲ್ಲಿ ಕ್ಷಮೆಯಾಚಿಸಿದೆ. ಈ ಬಗ್ಗೆ ನಿರ್ವಹಣೆ ತಂಡದ ಗಮಕ್ಕೆ ತಂದು ಕ್ರಮಕೈಗೊಳ್ಳಲಾಗುವುದು ಎಂದು ಏರ್ ಇಂಡಿಯಾಟ್ವೀಟ್ ಮಾಡಿದೆ.
ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಇಲಿ ಕಾಣಿಸಿಕೊಂಡಿತ್ತು. ಇಲಿಯ ಪತ್ತೆಗಾಗಿ 9 ಗಂಟೆಗಳ ಕಾಲ ತಪಾಸಣೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.