ನವದೆಹಲಿ: ಪಾಸ್‌ಪೋರ್ಟ್ ಸೇವೆಯನ್ನು ಡಿಜಿಲಾಕರ್‌ನೊಂದಿಗೆ ಸಂಯೋಜಿಸುವ ಹೊಸ ಯೋಜನೆಗೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ವಿದೇಶಾಂಗ ಇಲಾಖೆಯ ರಾಜ್ಯ ಖಾತೆ ಸಚಿವ ವಿ.ಮುರಳೀಧರನ್ ಅವರು ಯೋಜನೆಗೆ ಚಾಲನೆ ನೀಡಿದ್ದಾರೆ.
ಇದರಿಂದಾಗಿ, ಇನ್ನು ಮುಂದೆ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವವರು ಮೂಲ ದಾಖಲೆಗಳನ್ನೇ ಒದಗಿಸಬೇಕೆಂದಿಲ್ಲ. ಬದಲಾಗಿ ಡಿಜಿಲಾಕರ್‌ನಲ್ಲಿರುವ ದಾಖಲೆಗಳನ್ನೂ ಸಲ್ಲಿಸಬಹುದಾಗಿದೆ.
ಶೀಘ್ರದಲ್ಲೇ ಇ–ಪಾಸ್‌ಪೋರ್ಟ್ ನೀಡುವ ಯೋಜನೆ ಆರಂಭಿಸಲೂ ಸರ್ಕಾರ ಚಿಂತನೆ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.