ಶ್ರೀನಗರ: ಶಾರುಖ್ ಖಾನ್ ನಟನೆಯ ‘ಪಠಾಣ್’ ಸಿನಿಮಾ ವೀಕ್ಷಿಸಲು ಕಾಶ್ಮೀರ ಜನತೆ ಚಿತ್ರಮಂದಿರಗಳ ಮುಂದೆ ಸಾಲುಗಟ್ಟಿದ್ದು, 33 ವರ್ಷಗಳ ಬಳಿಕ ಕಣಿವೆ ನಾಡಿನಲ್ಲಿ ಚಿತ್ರಮಂದಿರಗಳು ಹೌಸ್‌ಫುಲ್ ಪ್ರದರ್ಶನ ಕಂಡ ಮೊದಲ ಚಿತ್ರವಾಗಿದೆ.
ಉಗ್ರರ ದಾಳಿ ಮತ್ತು ಬೆದರಿಕೆಯಿಂದ 3 ದಶಕಗಳ ಕಾಲ ಮುಚ್ಚಿದ್ದ ಚಿತ್ರ ಮಂದಿರಗಳು ಕಳೆದ ವರ್ಷ ಬಾಗಿಲು ತೆರೆದಿದ್ದವು.
ಬುಧವಾರ (ಡಿ.25) ಚಿತ್ರ ಬಿಡುಗಡೆಯಾದ ಮೊದಲ ದಿನವೇ ಹೌಸ್‌ಫುಲ್ ಪ್ರದರ್ಶನವಾಗಿದೆ. ಗಣರಾಜ್ಯೋತ್ಸವದ ದಿನ 7 ರಲ್ಲಿ 5 ಶೋ ಗಳು ಸಂಪೂರ್ಣ ಮಾರಾಟವಾಗಿದ್ದವು ಎಂದು ಕಾಶ್ಮೀರದಲ್ಲಿರುವ ಒಂದೇ ಒಂದು ಮಲ್ಟಿಪ್ಲೆಕ್ಸ್‌ನ ಮಾಲೀಕ ವಿಕಾಸ್ ಧರ್ ಹೇಳಿದ್ದಾರೆ.
1989ರಲ್ಲಿ ಬಿಡುಗಡೆಯಾದ ಸನ್ನಿ ಡಿಯೋಲ್ ಅವರ ‘ತ್ರಿದೇವ್‘ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು. ಆ ಬಳಿಕ ಈಗ ಪಠಾಣ್ ಅದರ ಸಾಲಿಗೆ ಸೇರಿದೆ ಎನ್ನುವುದು ಸಿನಿಮಾ ಪ್ರೇಮಿ ಮೊಮ್ಮದ ಇಕ್ಬಾಲ್ ಅವರ ಮಾತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.