ADVERTISEMENT

ಜಾಹೀರಾತು ಪರದೆಯಲ್ಲಿ ಅಶ್ಲೀಲ ವಿಡಿಯೊ ಪ್ರಸಾರ: ದಿಗ್ಭ್ರಮೆಗೊಂಡ ಪ್ರಯಾಣಿಕರು

ಪಟ್ನಾ ರೈಲು ನಿಲ್ದಾಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಮಾರ್ಚ್ 2023, 7:01 IST
Last Updated 21 ಮಾರ್ಚ್ 2023, 7:01 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಪಟ್ನಾ: ಬಿಹಾರದ ಪಟ್ನಾ ರೈಲು ನಿಲ್ದಾಣದಲ್ಲಿ ಜಾಹೀರಾತು ಪರದೆ ಮೇಲೆ 3 ನಿಮಿಷ ಅಶ್ಲೀಲ ವಿಡಿಯೊ ಪ್ರಸಾರವಾಗಿದ್ದು, ಜಾಹೀರಾತು ಗುತ್ತಿಗೆದಾರ ಕಂಪನಿ ವಿರುದ್ಧ ದೂರು ದಾಖಲಾಗಿದೆ.

ಭಾನುವಾರ ಬೆಳಗ್ಗೆ 9.30ರ ಸುಮಾರಿಗೆ ಪ್ಲಾಟ್‌ಫಾರ್ಮ್ 10ರಲ್ಲಿರುವ ಜಾಹೀರಾತು ಪರದೆ ಮೇಲೆ ಆಶ್ಲೀಲ ವಿಡಿಯೊ ಪ್ರಸಾರವಾಗಿದೆ. ಈ ವೇಳೆ ನಿಲ್ದಾಣದಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಜನರಿದ್ದರು. ಘಟನೆಯಿಂದ ಮುಜುಗರಕ್ಕೆ ಒಳಗಾದ ಪ್ರಯಾಣಿಕರು ದಿಗ್ಭ್ರಮೆಗೊಂಡರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ರೈಲ್ವೆ ಪೊಲೀಸರು ತಕ್ಷಣಕ್ಕೆ ಜಾಹೀರಾತು ಗುತ್ತಿಗೆದಾರ ಕಂಪನಿಯನ್ನು ಸಂಪರ್ಕಿಸಿ ಪ್ರಸಾರವನ್ನು ನಿಲ್ಲಿಸಿದರು. ಪ್ಲಾಟ್‌ಫಾರ್ಮ್ 10ರಲ್ಲಿರುವ ಜಾಹೀರಾತು ಪರದೆ ಮೇಲೆ ಮಾತ್ರ ಅಶ್ಲೀಲ ವಿಡಿಯೊ ಪ್ರಸಾರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ADVERTISEMENT

ಘಟನೆ ಬಳಿಕ ಜಾಹೀರಾತು ಪ್ರಸಾರ ಮಾಡುವ ಗುತ್ತಿಗೆ ಪಡೆದಿರುವ ದತ್ತಾ ಕಮ್ಯುನಿಕೇಷನ್ ಕಂಪನಿಗೆ ನೀಡಿದ್ದ ಗುತ್ತಿಗೆಯನ್ನು ರದ್ದು ಪಡಿಸಲಾಗಿದ್ದು ಕಂಪನಿಯ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ. ಘಟನೆ ಬಗ್ಗೆ ರೈಲ್ವೆ ಇಲಾಖೆಯೂ ವಿಚಾರಣೆ ನಡೆಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.