ADVERTISEMENT

'ಮಹಾರಾಷ್ಟ್ರ ಸರ್ಕಾರ ನಡೆಸುತ್ತಿರುವುದು ಶರದ್ ಪವಾರ್, ಉದ್ಧವ್ ಠಾಕ್ರೆಯಲ್ಲ'

ಪಿಟಿಐ
Published 30 ಅಕ್ಟೋಬರ್ 2020, 2:32 IST
Last Updated 30 ಅಕ್ಟೋಬರ್ 2020, 2:32 IST
ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್
ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್   

ಪುಣೆ: ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಮಹಾರಾಷ್ಟ್ರ ಸರ್ಕಾರವನ್ನು ನಡೆಸುತ್ತಿದ್ದಾರೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಗುರುವಾರ ಹೇಳಿದ್ದಾರೆ.

ಸಾಂಗ್ಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ಸಮಸ್ಯೆಗಳು ಬಗೆಹರಿಯಬೇಕಾದರೆ ಪವಾರ್ ಅವರನ್ನು ಭೇಟಿ ಮಾಡಬೇಕೇ ಹೊರತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಬಾರದು ಎಂದು ಹೇಳಿದ್ದಾರೆ.

ಪವಾರ್ ಅವರನ್ನು ಭೇಟಿಯಾಗಲು ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರಿಗೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ನೀಡಿದ ಸಲಹೆ ಕುರಿತು ಪ್ರತಿಕ್ರಿಯೆ ನೀಡುವಂತೆ ಪಾಟೀಲ್ ಅವರನ್ನು ಪ್ರಶ್ನಿಸಿದ್ದಕ್ಕೆ ಪವಾರ್ ಅವರೇ ಸರ್ಕಾರ ನಡೆಸುತ್ತಿದ್ದಾರೆ ಎಂದಿದ್ದಾರೆ.

ADVERTISEMENT

ಗ್ರಾಹಕರು ಹೆಚ್ಚಿನ ವಿದ್ಯುತ್ ಬಿಲ್ ಪಡೆಯುತ್ತಿರುವ ವಿಚಾರದ ಬಗ್ಗೆ ಎಂಎನ್‌ಎಸ್ ಮುಖ್ಯಸ್ಥರು ಹಿಂದಿನ ದಿನ ರಾಜ್ಯಪಾಲರನ್ನು ಭೇಟಿಯಾಗಿದ್ದರು.

'ರಾಜ್ಯಪಾಲರು ಏನು ಹೇಳಿದ್ದಾರೆ ಎಂಬುದು ನನಗೆ ತಿಳಿದಿಲ್ಲ, ಆದರೆ ನೀವು ನನ್ನನ್ನು ಕೇಳುವುದಾದರೆ, ರಾಜ್ಯವನ್ನು ನಡೆಸುತ್ತಿರುವುದು ಶರದ್ ಪವಾರ್ ಎಂದು ನಾನು ಹೇಳುತ್ತೇನೆ... ಉದ್ಧವ್‌ ಜೀ ಅವರನ್ನು ಭೇಟಿಯಾಗುವುದರಿಂದ ಏನು ಪ್ರಯೋಜನ?' ಎಂದು ಪಾಟೀಲ್ ಹೇಳಿದ್ದಾರೆ.

ಯಾವುದೇ ಬಗೆಹರಿಯಬೇಕಾದ ಸಮಸ್ಯೆ ಇದ್ದರೆ, ಅಂತವರು ಪವಾರ್ ಅವರನ್ನು ಭೇಟಿ ಮಾಡಬೇಕು ಏಕೆಂದರೆ ಉದ್ಧವ್-ಜಿ ಹೊರಗೆ ಪ್ರಯಾಣಿಸುವುದೇ ಇಲ್ಲ. ಪವಾರ್ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಸುಲಭವಾಗಿ ಜನರಿಗೆ ಸಿಗುತ್ತಾರೆ. ಹಾಗಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡುವ ಅಗತ್ಯವೇನು ಎಂದು ಜನರು ಯೋಚಿಸುತ್ತಾರೆ ಎಂದು ಹೇಳಿದ್ದಾರೆ.

ಕಳೆದ ಒಂಬತ್ತು ತಿಂಗಳಲ್ಲಿ ಮುಖ್ಯಮಂತ್ರಿ ಕಚೇರಿಗೆ ಬರೆದ ಪತ್ರಗಳಿಗೆ ಒಂದೇ ಒಂದು ಉತ್ತರವೂ ಬಂದಿಲ್ಲ ಎಂದು ಪಾಟೀಲ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.