ADVERTISEMENT

ಸ್ವಾತಿ ಮಾಲಿವಾಲ್ ಪ್ರಕರಣದಲ್ಲಿ ಎಎಪಿಗೆ ಸೋಲಾಗಲಿದೆ: ಬಿಜೆಪಿ

ಪಿಟಿಐ
Published 24 ಮೇ 2024, 13:57 IST
Last Updated 24 ಮೇ 2024, 13:57 IST
.
.   

ನವದೆಹಲಿ: ರಾಜ್ಯಸಭಾ ಸದಸ್ಯೆ ಸ್ವಾತಿ ಮಾಲಿವಾಲ್ ಮೇಲೆ ನಡೆದ ಹಲ್ಲೆ ಪ್ರಕರಣದಿಂದಾಗಿ ಜನರು ಕೋಪಗೊಂಡಿದ್ದು, ದೆಹಲಿಯ ಲೋಕಸಭಾ ಕ್ಪೇತ್ರಗಳಲ್ಲಿ ಎಎಪಿ ಅಭ್ಯರ್ಥಿಗಳು ಸೋಲಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್‌ ಭಾಟಿಯಾ ಶುಕ್ರವಾರ ಹೇಳಿದರು.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಆರೋಪಿ ಬಿಭವ್‌ ಕುಮಾರ್ ಅವರನ್ನು ರಕ್ಷಿಸಲು  ಯತ್ನಿಸುತ್ತಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಕೇಜ್ರಿವಾಲ್‌ ಅವರ ಸಮ್ಮುಖದಲ್ಲೇ ಬಿಭವ್‌ ಕುಮಾರ್ ಹಾಗೂ ಇತರರು ಹಲ್ಲೆ ನಡೆಸಿದ್ದಾರೆ ಎಂದು ಮಾಲಿವಾಲ್‌ ಅವರು ಆರೋಪಿಸಿದ್ದಾರೆ. ಆದರೆ ಈ ‌ಕುರಿತು ಕೇಜ್ರಿವಾಲ್‌ ಅವರು ಮೌನ ಮುರಿದಿಲ್ಲ. ಅವರು ಎಂತಹ ಕೀಳುಮಟ್ಟದ ಹಾಗೂ ನಾಚಿಕೆ ಇಲ್ಲದ ಮನುಷ್ಯ ಎಂಬುದು ಇದರಿಂದ ಗೊತ್ತಾಗುತ್ತದೆ’ ಎಂದರು.

ADVERTISEMENT

‘ಸತ್ಯವನ್ನು ಮರೆಮಾಚಲು ಮುಖ್ಯಮಂತ್ರಿಗಳ ಮನೆಯ ಸಿ.ಸಿ. ಕ್ಯಾಮರಾ ದೃಶ್ಯಾವಳಿಯನ್ನು ತಿರುಚಲಾಗಿದೆ’ ಎಂದು ಗೌರವ್‌ ಆರೋಪಿಸಿದರು. 

ಮಾಲಿವಾಲ್ ಅವರು ನೀಡಿದ್ದ ದೂರಿನ ಆಧಾರದಲ್ಲಿ ಕೇಜ್ರಿವಾಲ್‌ ಅವರ ಆಪ್ತ ಸಹಾಯಕ ಬಿಭವ್‌ ಕುಮಾರ್ ಅವರನ್ನು ಪೊಲೀಸರು ಈಚೆಗೆ ಬಂಧಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.