ಭೋಪಾಲ್: ಮಧ್ಯಪ್ರದೇಶದ ದೇವಸ್ ಜಿಲ್ಲೆಯಲ್ಲಿ ಚಿರತೆಯೊಂದಿಗೆ ಜನರು ನಡೆದುಕೊಂಡು ಬರುತ್ತಿರುವ ದೃಶ್ಯಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಚಿರತೆಯು ಖಾಯಿಲೆಗೆ ತುತ್ತಾಗಿರುವಂತೆ ಕಂಡುಬಂದಿದ್ದು, ಸುತ್ತಲೂ ಜನರು ಸೇರಿದ್ದಾರೆ. ಚಿರತೆಯ ಜತೆಗೆ ಆಟವಾಡುತ್ತಿರುವ ಹಾಗೂ ಅದರೊಂದಿಗೆ( ಚಿರತೆ) ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಿರುವ ದೃಶ್ಯಗಳು ವಿಡಿಯೊದಲ್ಲಿವೆ.
ಮೊದಲು ಚಿರತೆ ಕಂಡ ಜನರು ಆತಂಕಕ್ಕೆ ಒಳಗಾಗಿದ್ದರು. ಆದರೆ ಅದು (ಚಿರತೆ) ಜನರು ಸುತ್ತುವರೆದಿದ್ದರೂ ಸಹ ಆಕ್ರಮಣಕಾರಿಯಾಗಿರದೇ, ಸುಸ್ತಾಗಿರುವ ರೀತಿ ಕಂಡುಬಂದಿದೆ.
ಚಿರತೆಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಅನಾರೋಗ್ಯಕ್ಕೆ ಒಳಾಗಾಗಿರುವ ಚಿರತೆಯು ನಡೆಯಲು ಆಗದಿರುವ ಸ್ಥಿತಿಯಲ್ಲಿ ಕಂಡುಬಂದಿತ್ತು ಎಂದು ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ
ಎರಡು ವರ್ಷದ ಚಿರತೆಯನ್ನು ಭೋಪಾಲ್‌ನ ಪಶು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಚಿರತೆಯ ಆರೋಗ್ಯದ ಸ್ಥಿತಿ ಗಂಭೀರವಾಗಿದೆ ಎಂದು ಅರಣ್ಯಾಧಿಕಾರಿ ಸಂತೋಷ್ ಶುಕ್ಲಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.