ADVERTISEMENT

ಜಾರ್ಖಂಡ್‌ ರಕ್ಷಿಸಲು ಜನರು ಬಿಜೆಪಿಯೊಂದಿಗೆ ಕೈ ಜೋಡಿಸಿದ್ದಾರೆ: ಶಿವರಾಜ್‌ ಸಿಂಗ್

ಪಿಟಿಐ
Published 1 ಸೆಪ್ಟೆಂಬರ್ 2024, 10:49 IST
Last Updated 1 ಸೆಪ್ಟೆಂಬರ್ 2024, 10:49 IST
ಶಿವರಾಜ್‌ ಸಿಂಗ್‌ ಚೌಹಾಣ್‌
ಶಿವರಾಜ್‌ ಸಿಂಗ್‌ ಚೌಹಾಣ್‌   

ಭೋಪಾಲ: ಬುಡಕಟ್ಟು ಜನಾಂಗದ ಪ್ರಾಬಲ್ಯದ ಜಾರ್ಖಂಡ್‌ ಅಧಃಪತನವಾಗಿದ್ದು, ರಾಜ್ಯವನ್ನು ಉಳಿಸಲು ಜನರು ಬಿಜೆಪಿ ಪಕ್ಷದೊಂದಿಗೆ ಕೈ ಜೋಡಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ, ಬಿಜೆಪಿಯ ಉಸ್ತುವಾರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಹೇಳಿದ್ದಾರೆ.

ಹೇಮಂತ್‌ ಸೊರೇನ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ರಾಜ್ಯವನ್ನು ಹಾಳು ಮಾಡಿದೆ ಮತ್ತು ಎಲ್ಲೆಡೆ ಅರಾಜಕತೆ ಉಂಟಾಗಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

‘ರಾಜಕಾರಣಿಗಳು ಮತ್ತು ಅಧಿಕಾರಿಗಳ ಬಳಿ ರಾಶಿ ರಾಶಿ ಹಣದ ನೋಟುಗಳು ತನಿಖಾ ಏಜೆನ್ಸಿಯ ದಾಳಿಯ ವೇಳೆ ಪತ್ತೆಯಾಗುತ್ತಿವೆ. ಜಾರ್ಖಂಡ್‌ನ ಸಚಿವರು ಮತ್ತು ಇತರರು ಇದರಲ್ಲಿ ಭಾಗಿಯಾಗಿದ್ದಾರೆ. ಸ್ಥಳೀಯ ಹೆಣ್ಣಮಕ್ಕಳನ್ನು ಮದುವೆಯಾಗುವ ಮತ್ತು ಅವರ ಹೆಸರಿನಲ್ಲಿ ನಿವೇಶನಗಳನ್ನು ಖರೀದಿಸುತ್ತಿರುವ ಅತಿಕ್ರಮಣಕಾರರು ಆದಿವಾಸಿಗಳ ಭೂಮಿಯನ್ನು ಕಬಳಿಸುತ್ತಿದ್ದಾರೆ’ ಎಂದು ಚೌಹಾಣ್‌ ಆರೋಪಿಸಿದ್ದಾರೆ.

ADVERTISEMENT

ಈ ಬಾರಿ ಜಾರ್ಖಂಡ್ ರಕ್ಷಣೆಗೆ ವಿಧಾನಸಭೆ ಚುನಾವಣೆ ನಡೆಯಲಿದೆ. ರಾಜ್ಯವನ್ನು ಉಳಿಸಲು ಜನರು ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ನಾವು ಒಗ್ಗಟ್ಟಿನಿಂದ ಜಾರ್ಖಂಡ್‌ನಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಚಂಪೈ ಸೊರೇನ್‌ ಅವರು ಶುಕ್ರವಾರ (ಆಗಸ್ಟ್‌ 30) ಬಿಜೆಪಿ ಸೇರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.