ADVERTISEMENT

ಉತ್ತರಾಖಂಡ: ಭೂ ಕುಸಿತ ಸಂತ್ರಸ್ತರಿಂದ ಜೋಶಿಮಠದಲ್ಲಿ ಪ್ರತಿಭಟನೆ

ಪಿಟಿಐ
Published 12 ಮೇ 2023, 5:25 IST
Last Updated 12 ಮೇ 2023, 5:25 IST
ಜೋಶಿಮಠ
ಜೋಶಿಮಠ   

ಗೋಪೇಶ್ವರ (ಉತ್ತರಾಖಂಡ್‌): ಜೋಶಿಮಠದಲ್ಲಿ ಭೂ ಕುಸಿತದಿಂದ ಸಂತ್ರಸ್ತರಾದ ಜನರು ತಮಗಾದ ನಷ್ಟಕ್ಕೆ ಪರಿಹಾರ ನೀಡುವಂತೆ ರಾಜ್ಯ ಸರ್ಕಾರದ ವಿರುದ್ಧ ಪಂಜಿನ ಮೆರವಣಿಗೆ ನಡೆಸಿದರು. ಜೋಶಿಮಠ ಬಚಾವೋ ಸಂಘರ್ಷ ಸಮಿತಿ ಸಂಚಾಲಕ ಅತುಲ್ ಸತಿ ನೇತೃತ್ವದಲ್ಲಿ ಗುರುವಾರ ಸಂಜೆ ಕೈಯಲ್ಲಿ ಪಂಜು ಹಿಡಿದು ಘೋಷಣೆಗಳನ್ನು ಕೂಗುತ್ತಾ ಟಿಸಿಪಿ ಬಜಾರ್‌ನಿಂದ ಮಾರ್ವಾಡಿ ಚೌಕ್‌ವರೆಗೆ ಮೆರವಣಿಗೆ ನಡೆಸಿದರು.

ಸಮಿತಿಯ 11 ಅಂಶಗಳ ಬೇಡಿಕೆಯನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್‌ ಧಾಮಿ ಭರವಸೆ ನೀಡಿದ ನಂತರ ಸಮಿತಿಯು ಕಳೆದ ತಿಂಗಳು ತನ್ನ 107 ದಿನಗಳ ಧರಣಿ ಪ್ರತಿಭಟನೆಯನ್ನು ಹಿಂಪಡೆದಿದೆ. ಆದರೆ, ಮುಖ್ಯಮಂತ್ರಿಯಿಂದ ಭರವಸೆ ಸಿಕ್ಕಿ 22 ದಿನಗಳು ಕಳೆದಿವೆ, ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ, ನಮ್ಮ ಪ್ರತಿಭಟನೆಯನ್ನು ಮತ್ತೆ ಪ್ರಾರಂಭಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿಯಿಲ್ಲ ಎಂದು ಸತಿ ಹೇಳಿದ್ದಾರೆ.

ಸಂತ್ರಸ್ತರಿಗೆ ಪರಿಹಾರ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸುವುದು ಮತ್ತು ಜೋಶಿಮಠದಲ್ಲಿನ ಭೂ ಕುಸಿತದ ಬಿಕ್ಕಟ್ಟಿನ ಕುರಿತು ವಿವಿಧ ಪ್ರಮುಖ ವೈಜ್ಞಾನಿಕ ಸಂಸ್ಥೆಗಳು ನಡೆಸಿದ ಜಂಟಿ ಅಧ್ಯಯನದ ವರದಿಯನ್ನು ಸಾರ್ವಜನಿಕಗೊಳಿಸುವುದು ಸಮಿತಿಯ ಬೇಡಿಕೆಗಳಲ್ಲಿ ಸೇರಿವೆ.

ADVERTISEMENT

‘ಸಂತ್ರಸ್ತರಲ್ಲಿ ಶೇಕಡಾ 20 ರಷ್ಟು ಜನರಿಗೂ ಪರಿಹಾರ ಸಿಕ್ಕಿಲ್ಲ, ಜನರು ನಿರಾಶೆಗೊಂಡಿದ್ದಾರೆ. ಭೂ ಕುಸಿತವೂ ಮುಂದುವರೆದಿದೆ. ಮುಂಗಾರು ಸಮೀಪಿಸುತ್ತಿರುವಂತೆ ಕೆಟ್ಟ ಸಮಯಗಳು ಮುಂದಿವೆ’ ಎಂದು ಸತಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.