ಉತ್ತರ ಪ್ರದೇಶದಲ್ಲಿ ಚುನಾವಣಾ ಉಸ್ತುವಾರಿ ಹೊತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ವಿಧಾನಸಭಾ ಚುನಾವಣೆಯ ವಿವಿಧ ವಿಷಯಗಳು ಕುರಿತು ಮಾತನಾಡಿದ್ದಾರೆ. ಧ್ರುವೀಕರಣ, ಅಭಿವೃದ್ಧಿ ವಿಷಯ, ಮಹಿಳೆಯರಿಗೆ ಆದ್ಯತೆ, ಕೃಷಿ ಕಾನೂನುಗಳು ಹಾಗೂ ಲಖಿಂಪುರ ಖೇರಿ ಘಟನೆಯ ಪರಿಣಾಮದ ಬಗ್ಗೆ ಅವರು ಪಿಟಿಐ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ
* ಯಾವ ವಿಚಾರಗಳ ಮೇಲೆ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದೆ. ಕೃಷಿ ಕಾಯ್ದೆ ಚಳವಳಿ ಹಾಗೂ ಲಖಿಂಪುರ ಖೇರಿ ಪ್ರಕರಣ ಪ್ರಮುಖವಾಗುತ್ತವೆಯೇ?
ರಾಜಕೀಯ ಪಕ್ಷಗಳು ಬೇರೆ ಬೇರೆ ವಿಷಯಗಳಿಗೆ ಒತ್ತು ನೀಡುತ್ತಿವೆ. ಕೆಲವು ಪಕ್ಷಗಳು ಧರ್ಮ ಅಥವಾ ಜಾತಿಗಳ ಚರ್ಚೆಯನ್ನು ಹುಟ್ಟುಹಾಕಿ ಮತಗಳನ್ನು ಧ್ರುವೀಕರಿಸುವ ಉದ್ದೇಶ ಹೊಂದಿವೆ. ಇದು ಬದಲಾಗಬೇಕಿದೆ. ಉದ್ಯೋಗ, ಆರೋಗ್ಯ, ಶಿಕ್ಷಣ, ಅಭಿವೃದ್ದಿ ವಿಚಾರಗಳ ಮೇಲೆ ಚುನಾವ ಣೆಗಳು ನಡೆಯಬೇಕಿದೆ. ಕಾಂಗ್ರೆಸ್ ಪಕ್ಷ ಇಂತಹ ಸಕಾರಾತ್ಮಕ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಿದೆ. ಪ್ರಾಣ ಕಳೆದುಕೊಂಡ ರೈತರು, ಸರ್ಕಾರದ ಅಸಡ್ಡೆ, ನಿರಂಕುಶಾ
ಧಿಕಾರ ಧೋರಣೆಗಳು ಚುನಾವಣೆಯ ಫಲಿತಾಂಶವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ.
* ಕೋವಿಡ್ ಮೂರನೇ ಅಲೆ ಹೆಚ್ಚಿದೆ. ಈ ಎರಡು ವರ್ಷಗಳಲ್ಲಿ ಯೋಗಿ ಆದಿತ್ಯನಾಥ ಸರ್ಕಾರವು ಪರಿಸ್ಥಿತಿ ನಿಭಾಯಿಸಿದ ವಿಷಯ ಮಹತ್ವ ಪಡೆಯಲಿದೆಯೇ?
ಕೋವಿಡ್ ಎರಡನೇ ಅಲೆಯಲ್ಲಿ ಪರಿಸ್ಥಿತಿಯನ್ನು ಯೋಗಿ ಸರ್ಕಾರ ತೀರಾ ಕೆಟ್ಟದಾಗಿ ನಿಭಾಯಿಸಿದೆ. ಜನರಿಗೆ ಆರೋಗ್ಯ ಸೇವೆ, ಆಮ್ಲಜನಕ, ಔಷಧ, ಹಾಸಿಗೆಗಳನ್ನು ದೊರಕಿಸುವಲ್ಲಿ ಸರ್ಕಾರ ವಿಫಲವಾಗಿದೆ. ಜೀವ ಬಿಗಿಹಿಡಿದು ಕೆಲಸ ಮಾಡಿದ ಆಶಾ ಕಾರ್ಯಕರ್ತೆಯರು, ವೈದ್ಯರು, ನರ್ಸ್‌ಗಳಿಗೆ ಸೂಕ್ತ ಸಂಭಾವನೆ ನೀಡಲಿಲ್ಲ. ಜೀವಗಳನ್ನು ಉಳಿಸುವ ಬದಲು ಸತ್ಯ ಮುಚ್ಚಿಡಲು ಸರ್ಕಾರ ಸಾಕಷ್ಟು ಮುತುವರ್ಜಿ ವಹಿಸಿತು. ಇದು ಚುನಾವಣೆಯಲ್ಲಿ ಎಷ್ಟರ ಮಟ್ಟಿಗೆ ಪ್ರಭಾವ ಬೀರಲಿದೆ ಎಂದು ಹೇಳಲಾಗದು. ಜನರು ಕಹಿ ಘಟನೆಗಳನ್ನು ಮರೆತು, ಮುಂದೆ ಸಾಗುತ್ತಾರೆ. ಆದರೆ, ಸರ್ಕಾರದ ಹೊಣೆಗಾರಿಕೆಯನ್ನು ಜನರು ಪ್ರಶ್ನಿಸಬೇಕು.
* ಧ್ರುವೀಕರಣ ವಿಷಯ ಎಷ್ಟು ದೊಡ್ಡದು? ವಿಭಜಿಸುವ ಮಾತುಗಾರಿಯನ್ನು ಎದುರಿಸಲು ಏನು ಯೋಜನೆ ಹಾಕಿಕೊಂಡಿದ್ದೀರಿ?
ತಮ್ಮ ತಮ್ಮ ಮತ ನೆಲೆಗಳನ್ನು ಕ್ರೋಡೀಕರಿಸಲುಬಿಜೆಪಿ ಅಥವಾ ಸಮಾಜವಾದಿ ಪಕ್ಷಗಳು ಧ್ರುವೀಕರಣದ ಹಾದಿ ಹಿಡಿದಿವೆ. ಅಂತಿಮವಾಗಿ ಈ ಧ್ರುವೀಕರಣದ ದೊಡ್ಡ ಫಲಾನುಭವಿ ಬಿಜೆಪಿಯೇ ಆಗಬಹುದು ಎಂದು ನಾನು ಭಾವಿಸುತ್ತೇನೆ. ಕೆಲವು ರಾಜಕೀಯ ಪಕ್ಷಗಳಿಗೆ ಮಾತ್ರ ಲಾಭವಾಗುವ ವಿಭಜನೆ ಉದ್ದೇಶದ ರಾಜಕೀಯದಿಂದ ಜನ ದೂರ ಸರಿಯಬೇಕು.ಈ ಸರ್ಕಾರದ ಹೊರತಾಗಿ ಮತ್ತೊಂದು ಆಯ್ಕೆ ಇದೆ ಎಂಬುದನ್ನು ಜನ ಅರಿಯಬೇಕು.
* ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಚುನಾವಣೋತ್ತರ ಮೈತ್ರಿಗೆ ಕಾಂಗ್ರೆಸ್ ಮುಂದಾಗಲಿದೆಯೇ?
ಒಮ್ಮೆ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ, ಅಂತಹ ಪರಿಸ್ಥಿತಿ ಉದ್ಭವವಾದರೆ, ಆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಈ ಬಗ್ಗೆ ಈಗಲೇ ಪ್ರತಿಕ್ರಿಯಿಸುವುದು ಸರಿಯಲ್ಲ.
* ಧರ್ಮ, ಜಾತಿ ಲೆಕ್ಕಾಚಾರಗಳ ಹೊರತಾಗಿ, ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಭಿನ್ನ ಹಾದಿ ತುಳಿದಿದೆ. ಮಹಿಳೆಯರಿಗೆ ಆದ್ಯತೆ ನೀಡಿದೆ. ಮಹಿಳೆಯರು ಕಾಂಗ್ರೆಸ್ಸನ್ನು ನಿಜವಾಗಿಯೂ ಬೆಂಬಲಿಸಲಿದ್ದಾರೆಯೇ?
ಜನಸಂಖ್ಯೆಯಲ್ಲಿ ಶೇ 50ರಷ್ಟು ಪಾಲು ಹೊಂದಿರುವ ಮಹಿಳೆಯರು ರಾಜಕೀಯ ಪ್ರಾತಿನಿಧ್ಯದಿಂದ ವಂಚಿತರಾಗಿದ್ದಾರೆ. ಹೀಗಾಗಿ ಮಹಿಳೆಯರು ಪ್ರತ್ಯೇಕ ರಾಜಕೀಯ ಘಟಕವಾಗಿ ಮತ ಚಲಾವಣೆ ಮಾಡಬೇಕು. ಉನ್ನಾವ್ ಪ್ರಕರಣದ ಸಂತ್ರಸ್ತೆಯ ತಾಯಿಗೆ ಟಿಕೆಟ್ ನೀಡಿದ್ದಕ್ಕೆ ಸ್ಪಷ್ಟ ಕಾರಣವಿದೆ. ಅವರೂ ಸಹ ಶಾಸಕಿಯಾಗಿ ಆಯ್ಕೆಯಾಗಿ, ತನಗಾದ ಅನ್ಯಾಯವನ್ನು ಮೆಟ್ಟಿನಿಂತು ಹೊಸ ಬದುಕು ಕಟ್ಟುಕೊಳ್ಳಬೇಕು ಹಾಗೂ ಇತರರಿಗೆ ಸಹಾಯ ಮಾಡುವಂತಾಗಬೇಕು ಎಂಬ ಉದ್ದೇಶದಿಂದ ಟಿಕೆಟ್ ನೀಡಲಾಗಿದೆ. ಮಾಫಿಯಾದವರು ಹಾಗೂ ಅಪರಾಧಿಗಳಿಗೆ ಸರ್ಕಾರ ರಕ್ಷಣೆ ನೀಡುತ್ತದೆ. ಆದರೆ ದನಿ ಕಳೆದುಕೊಂಡವರಿಗೆ ಅವಕಾಶವೊಂದನ್ನು ನೀಡಬೇಕಲ್ಲವೇ
l ಧರ್ಮ, ಜಾತಿ ಲೆಕ್ಕಾಚಾರಗಳ ಹೊರತಾಗಿ, ಉನ್ನಾವ್ ಅತ್ಯಾಚಾರ ಸಂತ್ರಸ್ತೆಯ ತಾಯಿಗೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಭಿನ್ನ ಹಾದಿ ತುಳಿದಿದೆ. ಮಹಿಳೆಯರಿಗೆ ಆದ್ಯತೆ ನೀಡಿದೆ. ಮಹಿಳೆಯರು ಕಾಂಗ್ರೆಸ್ಸನ್ನು ನಿಜವಾಗಿಯೂ ಬೆಂಬಲಿಸಲಿದ್ದಾರೆಯೇ?
ಜನಸಂಖ್ಯೆಯಲ್ಲಿ ಶೇ 50ರಷ್ಟು ಪಾಲು ಹೊಂದಿರುವ ಮಹಿಳೆಯರು ರಾಜಕೀಯ ಪ್ರಾತಿನಿಧ್ಯದಿಂದ ವಂಚಿತರಾಗಿದ್ದಾರೆ. ಹೀಗಾಗಿ ಮಹಿಳೆಯರು ಪ್ರತ್ಯೇಕ ರಾಜಕೀಯ ಘಟಕವಾಗಿ ಮತ ಚಲಾವಣೆ ಮಾಡಬೇಕು. ಉನ್ನಾವ್ ಪ್ರಕರಣದ ಸಂತ್ರಸ್ತೆಯ ತಾಯಿಗೆ ಟಿಕೆಟ್ ನೀಡಿದ್ದಕ್ಕೆ ಸ್ಪಷ್ಟ ಕಾರಣವಿದೆ. ಅವರೂ ಸಹ ಶಾಸಕಿಯಾಗಿ ಆಯ್ಕೆಯಾಗಿ, ತನಗಾದ ಅನ್ಯಾಯವನ್ನು ಮೆಟ್ಟಿನಿಂತು ಹೊಸ ಬದುಕು ಕಟ್ಟುಕೊಳ್ಳಬೇಕು ಹಾಗೂ ಇತರರಿಗೆ ಸಹಾಯ ಮಾಡುವಂತಾಗಬೇಕು ಎಂಬ ಉದ್ದೇಶದಿಂದ ಟಿಕೆಟ್ ನೀಡಲಾಗಿದೆ. ಮಾಫಿಯಾದವರು ಹಾಗೂ ಅಪರಾಧಿಗಳಿಗೆ ಸರ್ಕಾರ ರಕ್ಷಣೆ ನೀಡುತ್ತದೆ. ಆದರೆ ದನಿ ಕಳೆದುಕೊಂಡವರಿಗೆ ಅವಕಾಶವೊಂದನ್ನು ನೀಡಬೇಕಲ್ಲವೇ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.