ADVERTISEMENT

ಕೋವಿಶೀಲ್ಡ್ ಲಸಿಕೆ ಪಡೆದವರು ಬಿಜೆಪಿ ವಿರುದ್ಧ ಮತ ಹಾಕಲಿದ್ದಾರೆ: ಅಖಿಲೇಶ್‌

ಪಿಟಿಐ
Published 2 ಮೇ 2024, 16:17 IST
Last Updated 2 ಮೇ 2024, 16:17 IST
ಅಖಿಲೇಶ್‌ ಯಾದವ್‌
ಅಖಿಲೇಶ್‌ ಯಾದವ್‌   

ಬದಾಂಯೂ (ಉತ್ತರ ಪ್ರದೇಶ): ಕೋವಿಶೀಲ್ಡ್ ಲಸಿಕೆಯ ಅಡ್ಡ ಪರಿಣಾಮದ ವಿಚಾರವಾಗಿ ಬಿಜೆಪಿ ವಿರುದ್ಧ ಹರಿಹಾಯ್ದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌, ಈ ಲಸಿಕೆಯನ್ನು ಪಡೆದುಕೊಂಡ ಜನರು ಬಿಜೆಪಿಯ ವಿರುದ್ಧ ಮತಹಾಕಲಿದ್ದಾರೆ ಎಂದು ಗುರುವಾರ ಹೇಳಿದರು.

ಪಕ್ಷದ ಅಭ್ಯರ್ಥಿ ಆದಿತ್ಯ ಯಾದವ್‌ ಪರವಾಗಿ ಹಮ್ಮಿಕೊಂಡಿದ್ದ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಲಸಿಕೆ ತಯಾರಿಸಿರುವ ಕಂಪನಿಗಳಿಂದ ಬಿಜೆಪಿ ದೇಣಿಗೆ ಪಡೆದಿದೆ ಎಂದು ಆರೋಪಿಸಿದರು.

ಬಿಜೆಪಿಯ ನಿರ್ಧಾರಗಳಿಂದ ಕೇವಲ ಸಂವಿಧಾನಕ್ಕೆ ಮಾತ್ರ ಅಪಾಯವಲ್ಲ, ಜನರ ಜೀವಕ್ಕೂ ಅಪಾಯವಿದೆ ಎಂದು ಹೇಳಿದರು.

ADVERTISEMENT

ಕೋವಿಡ್‌ ನಿಯಂತ್ರಣಕ್ಕಾಗಿ ತಾನು ಅಭಿವೃದ್ಧಿಪಡಿಸಿದ್ದ ‘ಕೋವಿಶೀಲ್ಡ್‌’ ಲಸಿಕೆಯಿಂದ ಗಂಭೀರ ಅಡ್ಡಪರಿಣಾಮ ಉಂಟಾಗುತ್ತದೆ ಎಂದು ಆಸ್ಟ್ರಾಜೆನೆಕಾ ಕಂಪನಿ ಈಚೆಗೆ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.