ತಿರುನೆಲ್ವೇಲಿ (ತಮಿಳುನಾಡು): ಮೇಜರ್ ಮುಕುಂದ್ ವರದರಾಜನ್ ಅವರ ಜೀವನಚರಿತ್ರೆ ಆಧಾರಿತ, ನಟ ಶಿವಕಾರ್ತಿಕೇಯನ್ ಅಭಿನಯದ ‘ಅಮರನ್’ ಸಿನಿಮಾ ಪ್ರದರ್ಶಿಸುತ್ತಿದ್ದ ಚಿತ್ರಮಂದಿರದ ಮೇಲೆ ದುಷ್ಕರ್ಮಿಗಳು ಶನಿವಾರ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ.
ಬಾಂಬ್ ಸ್ಫೋಟದ ಬಳಿಕ ಚಿತ್ರಮಂದಿರವನ್ನು ಪ್ರವೇಶಿಸಿದ್ದ ಹಿಂದೂ ಮುನ್ನಾನಿ (ಹಿಂದೂ ಫ್ರಂಟ್) ಕಾರ್ಯಕರ್ತರ ಗುಂಪನ್ನು ಬಂಧಿಸಿದ ಪೊಲೀಸರು, ಕೆಲ ಹೊತ್ತಿನ ಬಳಿಕ ಬಿಡುಗಡೆ ಮಾಡಿದ್ದಾರೆ.
ಮೇಲಪಾಳ್ಯಂ ಸಿನಿಮಾ ಕಾಂಪ್ಲೆಕ್ಸ್‌ನ ಆವರಣಗೋಡೆಯೊಳಗೆ ದುಷ್ಕರ್ಮಿಗಳಿಬ್ಬರು ಪೆಟ್ರೋಲ್ ಬಾಂಬ್‌ಗಳನ್ನು ಎಸೆದಿದ್ದಾರೆ. ಅವು ಸ್ಫೋಟಗೊಂಡರೂ ಚಿತ್ರಮಂದಿರಕ್ಕೆ ಯಾವುದೇ ಹಾನಿಯಾಗಿಲ್ಲ, ಯಾರೊಬ್ಬರೂ ಗಾಯಗೊಂಡಿಲ್ಲ ಎಂದು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ.
ಘಟನೆಯನ್ನು ತಮಿಳುನಾಡು ಬಿಜೆಪಿ ಘಟಕ ತೀವ್ರವಾಗಿ ಖಂಡಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.