ADVERTISEMENT

ಕೇಂದ್ರಕ್ಕೆ 7 ವರ್ಷದಲ್ಲಿ ಪೆಟ್ರೋಲ್‌ನಿಂದ ₹25 ಲಕ್ಷ ಕೋಟಿ ಆದಾಯ: ಸಚಿನ್‌ ಪೈಲಟ್‌

ಏಜೆನ್ಸೀಸ್
Published 17 ಜುಲೈ 2021, 3:16 IST
Last Updated 17 ಜುಲೈ 2021, 3:16 IST
ಕಾಂಗ್ರೆಸ್‌ ಮುಖಂಡ ಸಚಿನ್‌ ಪೈಲಟ್‌ ಅವರ ಸಾಂದರ್ಭಿಕ ಚಿತ್ರ
ಕಾಂಗ್ರೆಸ್‌ ಮುಖಂಡ ಸಚಿನ್‌ ಪೈಲಟ್‌ ಅವರ ಸಾಂದರ್ಭಿಕ ಚಿತ್ರ   

ಡೆಹ್ರಾಡೂನ್‌: ರಾಷ್ಟ್ರದ 250ಕ್ಕೂ ಹೆಚ್ಚು ನಗರಗಳಲ್ಲಿ ಪೆಟ್ರೋಲ್‌ ದರ ₹100 ದಾಟಿದೆ ಎಂಬುದು ಕಲ್ಪನೆಗೆ ನಿಲುಕದ್ದಾಗಿದೆ ಎಂದು ಕಾಂಗ್ರೆಸ್‌ ಮುಖಂಡ ಸಚಿನ್‌ ಪೈಲಟ್‌ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಡೆಹ್ರಾಡೂನ್‌ನಲ್ಲಿ ಮಾತನಾಡಿದ ಪೈಲಟ್‌, ಈ ಒಂದು ವರ್ಷದಲ್ಲಿ ಕನಿಷ್ಠ 66 ಬಾರಿ ಪೆಟ್ರೋಲ್‌ ದರವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ ಎಂದರು.

ಕೇಂದ್ರ ಸರ್ಕಾರವೇ ನೀಡಿರುವ ಮಾಹಿತಿ ಪ್ರಕಾರ ಕಳೆದ ಏಳು ವರ್ಷಗಳಲ್ಲಿ ಪೆಟ್ರೋಲ್‌ ಮೇಲಿನ ಅಬಕಾರಿ ತೆರಿಗೆಯನ್ನು ಶೇಕಡಾ 250ರಷ್ಟು ಹೆಚ್ಚಿಸಲಾಗಿದೆ. ಡೀಸೆಲ್‌ ಮೇಲಿನ ಅಬಕಾರಿ ತೆರಿಗೆಯನ್ನು ಶೇಕಡಾ 800ರಷ್ಟು ಏರಿಕೆ ಮಾಡಲಾಗಿದೆ. ಇದರಿಂದ ಕೇಂದ್ರ ಸರ್ಕಾರಕ್ಕೆ ಬಂದಿರುವ ಆದಾಯ 25 ಲಕ್ಷ ಕೋಟಿ. ಇದು ಸಾಮಾನ್ಯ ಜನರ ಜೇಬಿನ ಮೇಲಿನ ನೇರ ದಾಳಿ ಎಂದು ಪೈಲಟ್‌ ವಾಗ್ದಾಳಿ ನಡೆಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.