ಡೆಹ್ರಾಡೂನ್: ಇದೇ ಮೊದಲ ಬಾರಿಗೆ ಉತ್ತರಾಖಂಡದಲ್ಲಿ ಫಿಲಿಪ್ಪೀನ್ಸ್ ಮೂಲದ ಸುಗಂಧಿತ ‘ಯಿಲಾಂಗ್–ಯಿಲಾಂಗ್’ ಹೂವು ಅರಳಿದೆ.
ಹಲ್ಡ್ವಾನಿ ಅರಣ್ಯ ಪ್ರದೇಶದ ಆರೋಮ್ಯಾಟಿಕ್ ಗಾರ್ಡನ್‌ನಲ್ಲಿ ಈ ಹೂವು ಅರಳಿದೆ. ಇದನ್ನು ‘ಸುಗಂಧ ದ್ರವ್ಯಗಳ ರಾಣಿ’ ಎಂದೂ ಕರೆಯುತ್ತಾರೆ.
ಯಿಲಾಂಗ್ –ಯಿಲಾಂಗ್ ( Ylang-ylang)ಅನ್ನು ವೈಜ್ಞಾನಿಕವಾಗಿ Cananga odorata ಎಂದು ಕರೆಯಲಾಗುತ್ತದೆ, ಆರ್ದ್ರ, ತಗ್ಗು ಉಷ್ಣವಲಯ ಅಥವಾ ತೇವಾಂಶವುಳ್ಳ ಕಣಿವೆಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ ಎಂಧು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜೀವ್ ಚತುರ್ವೇದಿ ಹೇಳಿದ್ದಾರೆ.
ಇದನ್ನು ಸಾರಭೂತ ತೈಲಗಳಿಗೆ ಮತ್ತು ಸುಗಂಧ ದ್ರವ್ಯ ಉದ್ಯಮದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.
ಅರಣ್ಯಕ್ಕೆ ತಂದು ನೆಟ್ಟು ಮೂರು ವರ್ಷಗಳ ಬಳಿಕ ಹೂವು ಬಿಟ್ಟಿದೆ. ಇದು ಸ್ಥಳೀಯರ ಕೃಷಿಗೆ ಆದಾಯದ ತರುವಂಥದ್ದಾಗಿದೆ ಎಂದರು.
ಮತ್ತೊಬ್ಬ ಅರಣ್ಯ ಅಧಿಕಾರಿ ಮನೋಜ್ ಸಿಂಗ್, ಹೂವಿಗೆ ಆಗ್ನೇಯ ಏಷ್ಯಾ ಮೂಲವಾಗಿದೆ ಎಂದರು. ಹೂವಿನ ಸಾರಭೂತ ತೈಲವು ಮಲೇರಿಯಾ, ಅಸ್ತಮಾ, ರಕ್ತದೊತ್ತಡ ಮತ್ತು ಕೀಲು ನೋವನ್ನು ಗುಣಪಡಿಸಲು ಬಳಸಬಹುದಾದ ಔಷಧೀಯ ಗುಣಗಳನ್ನು ಹೊಂದಿದೆ. ಅಧ್ಯಯನಕ್ಕಾಗಿ ಈ ಗಿಡವನ್ನು ತಂದು ನೆಡಲಾಗಿದೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.