ನವದೆಹಲಿ: 2019ನೇ ಸಾಲಿನ ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯ ಸಂಜಾತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಎಡಪಂಥೀಯ ಚಿಂತನೆ ಹೊಂದಿದವರು. 2019ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಸೂಚಿಸಿದ್ದನ್ಯಾಯ್ ಯೋಜನೆ ಬ್ಯಾನರ್ಜಿ ಪರಿಕಲ್ಪನೆಯದ್ದು. ಅದನ್ನು ದೇಶದ ಜನರು ತಿರಸ್ಕರಿಸಿದ್ದರು ಎಂದು ಕೇಂದ್ರ ಸಚಿವ ಪೀಯೂಷ್ ಗೋಯಲ್ ಹೇಳಿದ್ದಾರೆ.
ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಗಳಿಸಿದ ಬ್ಯಾನರ್ಜಿ, ಭಾರತೀಯ ಎಂಬುದರ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆನಾನು ಬ್ಯಾನರ್ಜಿ ಚಿಂತನೆಗಳನ್ನು ಒಪ್ಪುವುದಿಲ್ಲ ಎಂದು ಹೇಳಿದ್ದಾರೆ ಸಚಿವರು.
ಇದನ್ನೂ ಓದಿ:ಭಾರತದ ಆರ್ಥಿಕತೆ ಶೋಚನೀಯ: ಅಭಿಜಿತ್ ಬ್ಯಾನರ್ಜಿ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಬ್ಯಾನರ್ಜಿ ಭಾರತದ ಆರ್ಥಿಕತೆಯನ್ನು ನಿಭಾಯಿಸಿದ್ದರ ಬಗ್ಗೆ ಕೇಂದ್ರ ಸರ್ಕಾರ ಟೀಕೆ ಮಾಡುತ್ತಿರುವುದನ್ನು ಪ್ರಶ್ನಿಸಿದಾಗ ಗೋಯಲ್ ಈ ರೀತಿ ಉತ್ತರಿಸಿದ್ದಾರೆ.
ಬ್ಯಾನರ್ಜಿ ಅವರಿಗೆ ಇತ್ತೀಚೆಗೆ ನೋಬೆಲ್ ಪ್ರಶಸ್ತಿ ಸಿಕ್ಕಿದೆ. ಅದಕ್ಕೆ ನಾನು ಅಭಿನಂದಿಸುತ್ತೇನೆ. ಆದರೆ ಅವರ ಚಿಂತನೆ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಅವರ ಚಿಂತನೆಗಳ ಎಡಪಕ್ಷದತ್ತ ವಾಲಿದೆ. ಅವರು ನ್ಯಾಯ್ ಯೋಜನೆಯನ್ನು ಬೆಂಬಲಿಸಿದ್ದರು.ದೇಶದ ಜನರು ಅದನ್ನು ಸಂಪೂರ್ಣವಾಗಿ ನಿರಾಕರಿಸಿದ್ದರು.
ಭಾರತೀಯರೊಬ್ಬರಿಗೆ ನೋಬೆಲ್ ಪ್ರಶಸ್ತಿ ಸಿಕ್ಕಿದ್ದು ಹೆಮ್ಮೆಯ ವಿಷಯ. ಆದರೆ ಅವರ ಚಿಂತನೆಗಳನ್ನು ಒಪ್ಪಲೇಬೇಕೆಂದಿಲ್ಲ. ದೇಶದ ಜನರೇ ಅವರ ಸಲಹೆಯನ್ನು ನಿರಾಕರಿಸಿರುವಾಗ ಅವರ ಚಿಂತನೆಗಳನ್ನು ಸ್ವೀಕರಿಸಬೇಕು ಎಂದು ನನಗನಿಸುವುದಿಲ್ಲ ಎಂದಿದ್ದಾರೆ.
ದೇಶದ ಆರ್ಥಿಕತೆ ಬಗ್ಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಟೀಕಿಗೆಪ್ರತಿಕ್ರಯಿಸಿದ ಗೋಯಲ್, ಅರ್ಥಶಾಸ್ತ್ರಜ್ಞರಾಗಿರುವ ಮನಮೋಹನ್ ಸಿಂಗ್ ಅವರು 2014ರಲ್ಲಿ ಅವರು ಅಧಿಕಾರದಿಂದ ಕೆಳಗಿಳಿದಾಗ ದೇಶದ ಆರ್ಥಿಕ ಸ್ಥಿತಿ ಹೇಗೆ ಇತ್ತು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಆ ಆರ್ಥಿಕ ಪರಿಸ್ಥಿತಿಯನ್ನು ಯಾವ ರೀತಿ ಬದಲಾಯಿಸಿದವು ಎಂಬುದು ಅವರಿಗೆ ಕಾಣಿಸುತ್ತಿಲ್ಲವೇ ಎಂದಿದ್ದಾರೆ.
ಅದೇ ವೇಳೆ ಟೆಲಿಕಾಂ ಹಗರಣ, ಕಲ್ಲಿದ್ದಲು ಹಗರಣ, ಮಹಾರಾಷ್ಟ್ರದಲ್ಲಿ ನೀರಾವರಿ ಹಗರಣ ಎಲ್ಲವೂ ಸಿಂಗ್ ಅಧಿಕಾರವಧಿಯಲ್ಲೇ ನಡೆದಿದ್ದು ಎಂದು ಗೋಯಲ್ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.