ಬದೌನ್ (ಉತ್ತರ ಪ್ರದೇಶ): ಇಲ್ಲಿನ ಜಾಮಾ ಮಸೀದಿ ಶಂಸಿಯು ಶಿವನ ದೇಗುಲವಾಗಿತ್ತು. ಹೀಗಾಗಿ ಸನಾತನ ಧರ್ಮ ಪಾಲಕರಿಗೆ ಇಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕೆಂದು ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ವಕೀಲರು ತಿಳಿಸಿದ್ದಾರೆ.
‘ಕಟ್ಟಡ ಜಾಮಾ ಮಸೀದಿ ಅಲ್ಲ, ನೀಲಕಂಠ ಮಹದೇವ ಮಹರಾಜ್ ಅವರ ಇಶಾನ್ ಮಂದಿರ’ ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ ಈ ಪ್ರದೇಶದಲ್ಲಿ ಸಮೀಕ್ಷೆ ನಡೆಸಲು ಆಯೋಗವೊಂದನ್ನು ರಚಿಸುವಂತೆ ಕೋರಿ ನ್ಯಾಯಾಲಯದಲ್ಲಿ ಪ್ರತ್ಯೇಕ ಅರ್ಜಿ ಸಲ್ಲಿಸಲಾಗಿದೆ.
ಪ್ರಕರಣ ವಿಚಾರಣೆ ನಡೆಸಿದ ಸಿವಿಲ್ ನ್ಯಾಯಾಧೀಶ (ಹಿರಿಯ ವಿಭಾಗ) ವಿಜಯ್ ಗುಪ್ತಾ ಅವರು, ಸೆಪ್ಟೆಂಬರ್ 15ರ ಮುಂದಿನ ವಿಚಾರಣೆ ವೇಳೆ ತಮ್ಮ ಪರ ವಾದ ಮಂಡನೆಗೆ ಹಾಜರಿರುವಂತೆ ಜಾಮಾ ಮಸೀದಿ ಶಂಸಿಯ ನಿರ್ವಹಣಾ ಸಮಿತಿ ಇಂತೆಜಾಮಿಯಾಗೆ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.