ನವದೆಹಲಿ: ವಿಶೇಷ ವಿವಾಹ ಕಾಯ್ದೆಯಡಿ ಸಲಿಂಗಿಗಳ ವಿವಾಹ ಮತ್ತು ವಿದೇಶ ವಿವಾಹ ಕಾಯ್ದೆಯಡಿ ಸಲಿಂಗಿಗಳ ವಿವಾಹದ ನೋಂದಣಿ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸುವಂತೆ ದೆಹಲಿ ಹೈಕೋರ್ಟ್, ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರಕ್ಕೆ ಸೂಚಿಸಿದೆ.
ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಬೇಕೆಂದು ಕೋರಿ ಇಬ್ಬರು ಮಹಿಳೆಯರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ,ನ್ಯಾಯಮೂರ್ತಿ ಆರ್.ಎಸ್.ಎಂಡ್ಲವ್ ಮತ್ತು ಆಶಾ ಮೆನನ್ ಅವರನ್ನೊಳಗೊಂಡ ಪೀಠವು ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ನೋಟಿಸ್ ನೀಡಿದೆ.
ಇನ್ನೊಂದು ಪ್ರಕರಣದಲ್ಲಿ ಇಬ್ಬರು ಪುರುಷರು ಅಮೆರಿಕದಲ್ಲಿ ವಿವಾಹವಾಗಿದ್ದು, ವಿದೇಶಿ ವಿವಾಹ ಕಾಯ್ದೆಯಡಿ ಅವರ ಮದುವೆ ನೋಂದಾಯಿಸಲು ನಿರಾಕರಿಸಲಾಗಿದೆ. ಆ ಪುರುಷರು ಸಲ್ಲಿಸಿದ ಮನವಿಯ ಮೇರೆಗೆ, ನ್ಯಾಯಾಲಯವು ಕೇಂದ್ರ ಸರ್ಕಾರ, ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ನೋಟಿಸ್ ನೀಡಿದೆ. ಪ್ರಕರಣದ ವಿಚಾರಣೆಯನ್ನು 2021ರ ಜನವರಿ 8ಕ್ಕೆ ಮುಂದೂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.