ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ಅವರ 69ನೇ ಜನ್ಮದಿನ. ಬೆಳಿಗ್ಗೆಯೇ ತಾಯಿ ಹೀರಾಬೆನ್ ಅವರಿಂದ ಆಶೀರ್ವಾದ ಪಡೆಯುವ ಮೂಲಕ ದಿನದ ಆರಂಭ ಮಾಡಲಿದ್ದಾರೆ.
ಸೋಮವಾರ ರಾತ್ರಿಯೇ ಅಹಮದಾಬಾದ್‌ಗೆ ಮೋದಿ ಬಂದಿಳಿದಿದ್ದಾರೆ. ಗುಜರಾತ್‌ನ ಗಾಂಧಿ ನಗರದ ರಾಯ್‌ಸಿನ್ ಗ್ರಾಮದಲ್ಲಿರುವ ತಾಯಿ ಹೀರಾಬೆನ್(98) ಅವರನ್ನು ಭೇಟಿ ಮಾಡಲಿದ್ದಾರೆ. ಹೀರಾಬೆನ್ ಅವರು ಕಿರಿಯ ಮಗ ಪಂಕಜ್ ಮೋದಿ ಅವರೊಂದಿಗಿದ್ದಾರೆ.
ಪ್ರಧಾನಿ ಮೋದಿ ನಂತರ ಗಾಂಧಿನಗರದಿಂದ ನರ್ಮದಾ ಜಿಲ್ಲೆಯ ಕೆವಾಡಿಯಾಗೆ ತೆರಳಿದ್ದಾರೆ. ಅಲ್ಲಿ ‘ಏಕತಾ ಮೂರ್ತಿ‘ ಮತ್ತು ನರ್ಮದಾ ನದಿಯ ಸರ್ದಾರ್ ಸರೋವರ ಡ್ಯಾಂ ಯೋಜನೆ ಹಾಗೂ ಕಾರ್ಯಗಳ ಪರಿಶೀಲನೆ ನಡೆಸಲಿದ್ದಾರೆ.
ಇದನ್ನೂ ಓದಿ: ಹ್ಯೂಸ್ಟನ್ನಲ್ಲಿಪ್ರಧಾನಿಗೆ ಸಾಥ್ ನೀಡಲಿರುವ ಟ್ರಂಪ್
ಕಳೆದ ವರ್ಷ ಅಕ್ಟೋಬರ್ 31, ಸರ್ದಾರ್ ಪಟೇಲ್ ಅವರ ಜನ್ಮದಿನದಂದು ಪ್ರಧಾನಿ ಮೋದಿ ಜಗತ್ತಿನ ಅತಿ ಎತ್ತರದ(182 ಮೀಟರ್) ಏಕತಾ ಮೂರ್ತಿ ಲೋಕಾರ್ಪಣೆ ಮಾಡಿದ್ದರು.
ನರ್ಮದಾ ನದಿಗೆ ಮಾ ನರ್ಮದಾ ಪೂಜೆ ಅರ್ಪಿಸಲಿರುವ ಪ್ರಧಾನಿ ಸರ್ದಾರ್ ಸರೋವರ ಡ್ಯಾಂನ ನಿಯಂತ್ರಣ ಕೊಠಡಿಗೆ ಭೇಟಿ ನೀಡಲಿದ್ದಾರೆ. 2017ರಲ್ಲಿ ಉದ್ಘಾಟನೆಯಾಗಿದ್ದ ಡ್ಯಾಂನಲ್ಲಿ ನೀರಿನ ಮಟ್ಟ ಗರಿಷ್ಠ (138.68 ಮೀಟರ್) ತಲುಪಿದೆ. ಇದೇ ಸಮಯದಲ್ಲಿ ನಮಾಮಿ ನರ್ಮದೆ ಮಹೋತ್ಸವಕ್ಕೆ ಮೋದಿ ಚಾಲನೆ ನೀಡಲಿದ್ದಾರೆ.
ಇದನ್ನೂ ಓದಿ:70 ವರ್ಷಗಳಲ್ಲಿ ಆಗದ್ದೆಲ್ಲಾ ಆಗುತ್ತಿದೆ!
ಗುಜರಾತ್ 131 ನಗರ ಕೇಂದ್ರಗಳಿಗೆ ಮತ್ತು 9,633 ಗ್ರಾಮಗಳಿಗೆ ಹಾಗೂ 15 ಜಿಲ್ಲೆಗಳ 3,112 ಗ್ರಾಮಗಳಲ್ಲಿ ಕೃಷಿ ಚಟುವಟಿಕೆಗಳಿಗೆ ನರ್ಮದಾ ಡ್ಯಾಂನಿಂದ ನೀರು ಪೂರೈಕೆಯ ಗುರಿ ಹೊಂದಲಾಗಿದೆ.
ಗರುಡೇಶ್ವರ ಗ್ರಾಮದಲ್ಲಿ ದತ್ತಾತ್ರೇಯ ದೇವಾಲಯಕ್ಕೆ ಭೇಟಿ ನೀಡಿ ಮಕ್ಕಳ ಪಾರ್ಕ್‌ನಲ್ಲಿ ಕೆಲ ಸಮಯ ಕಳೆಯಲಿದ್ದಾರೆ. ಅಹಮದಾಬಾದ್‌ನಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಕೆವಾಡಿಯಾದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿ ಮಾತನಾಡಲಿದ್ದಾರೆ.
ಇದನ್ನೂ ಓದಿ:ಕಾಶ್ಮೀರ ಸ್ಥಿತಿ ಭಯಾನಕ
ಕಳೆದ ವರ್ಷ ಉತ್ತರ ಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಶಾಲಾ ಮಕ್ಕಳೊಂದಿಗೆ ಹುಟ್ಟು ಹಬ್ಬ ಆಚರಿಸಿಕೊಂಡು ಸಂಭ್ರಮಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.