ನವದೆಹಲಿ: 2021ರ ಭುವನ ಸುಂದರಿ ಕಿರೀಟ ತೊಟ್ಟ ಚಂಡೀಗಢದ 21 ವರ್ಷದ ಹರ್ನಾಜ್ ಸಂಧು ಅವರನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಅಭಿನಂದಿಸಿದ್ದಾರೆ.
' ಭುವನ ಸುಂದರಿ ಕಿರೀಟವನ್ನು ಅಲಂಕರಿಸಿದ್ದಕ್ಕಾಗಿ ಹರ್ನಾಜ್ ಸಂಧು ಅವರಿಗೆ ಅಭಿನಂದನೆಗಳು. ಅವರ ಮುಂದಿನ ಪ್ರಯತ್ನಗಳಿಗೆ ಶುಭವಾಗಲಿ‘ ಎಂದು ಪ್ರಧಾನಿ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಸುಶ್ಮಿತಾ ಸೇನ್ ಮತ್ತು ಲಾರಾ ದತ್ತಾ ನಂತರ ಭುವನ ಸುಂದರಿ ಕಿರೀಟವನ್ನು ಪಡೆದ ಮೂರನೇ ಭಾರತೀಯರೆಂಬ ಹೆಗ್ಗಳಿಕೆಗೆ ಸಂಧು ಪಾತ್ರರಾಗಿದ್ದಾರೆ.
21 ವರ್ಷಗಳ ಬಳಿಕ ಭಾರತದಿಂದ ಆಯ್ಕೆಯಾದ ಮೊದಲ ಭುವನ ಸುಂದರಿ ಹರ್ನಾಜ್ ಸಂಧು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.