PHOTOS: ಕಾಜಿರಂಗ ಉದ್ಯಾನದಲ್ಲಿ ಆನೆ ಏರಿ ಘೇಂಡಾಮೃಗಗಳ ನೋಡಿದ ಪ್ರಧಾನಿ ಮೋದಿ
ಕಾಜಿರಂಗ ಉದ್ಯಾನದಲ್ಲಿ ಆನೆ ಸಫಾರಿ ಮಾಡಿದ ಪ್ರಧಾನಿ ಮೋದಿ
ಪ್ರಜಾವಾಣಿ ವೆಬ್ ಡೆಸ್ಕ್
Published 9 ಮಾರ್ಚ್ 2024, 5:11 IST
Last Updated 9 ಮಾರ್ಚ್ 2024, 5:11 IST
ಕಾಜಿರಂಗ ಉದ್ಯಾನದಲ್ಲಿ ಆನೆ ಸಫಾರಿ ಮಾಡಿದ ಪ್ರಧಾನಿ ಮೋದಿ
ಅಸ್ಸಾಂನ ಖ್ಯಾತ ಕಾಜಿರಂಗ ರಾಷ್ಟ್ರೀಯ ಉದ್ಯಾನ ಹಾಗೂ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ಬೆಳಿಗ್ಗೆ ಆನೆ ಹಾಗೂ ಜೀಪ್ ಸಫಾರಿ ಮಾಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿದ್ದು, ಪ್ರಧಾನಿ ಮೋದಿಯವರ ಚೊಚ್ಚಲ ಭೇಟಿ ಇದು.
ADVERTISEMENT
ಸೆಂಟ್ರಲ್ ಖೋರಾ ವಲಯದ ಮಿಹಿಮುಖ್ ವಲಯದಲ್ಲಿ ಮೊದಲು ಆನೆ ಸಫಾರಿ ಮಾಡಿದ ಪ್ರಧಾನಿ ಬಳಿಕ ಇದೇ ವಲಯದಲ್ಲಿ ಜೀಪ್ ಸಫಾರಿಯನ್ನೂ ಮಾಡಿದರು ಎಂದು ತಿಳಿಸಿದ್ದಾರೆ.
ಪ್ರಧಾನಿಗೆ ಉದ್ಯಾನದ ನಿರ್ದೇಶಕಿ ಸೋನಾಲಿ ಘೋಷ್ ಹಾಗೂ ಇತರೆ ಹಿರಿಯ ಅರಣ್ಯ ಸಿಬ್ಬಂದಿಗಳು ಸಾಥ್ ನೀಡಿದರು. ಈ ವೇಳೆ ಉದ್ಯಾನದಲ್ಲಿ ಕಂಡು ಬಂದ ಘೇಂಡಾಮೃಗಗಳು
ಎರಡು ದಿನಗಳ ಅಸ್ಸಾಂ ಪ್ರವಾಸಕ್ಕೆ ಬಂದಿರುವ ಅವರು, ಶುಕ್ರವಾರ ಸಂಜೆ ಕಾಜಿರಂಗಕ್ಕೆ ಆಗಮಿಸಿದ್ದರು.
ಇಂದು ಮಧ್ಯಾಹ್ನ ಅಹೊಮ್ ಜನರಲ್ ಲಚಿತ್ ಬರ್ಪುಕನ್ ಅವರ 125 ಅಡಿಯ ‘ಶೌರ್ಯದ ಪ್ರತಿಮೆ’ಯನ್ನು ಅವರು ಅನಾವರಣಗೊಳಿಸಲಿದ್ದಾರೆ.
ಬಳಿಕ ಜೊರ್ಹತ್ ಜಿಲ್ಲೆಯ ಮೆಲೆಂಗ್ ಮೆಟೆಲಿ ಪೊಥರ್‌ನಲ್ಲಿ, ಕೇಂದ್ರ ಹಾಗೂ ರಾಜ್ಯ ಪ್ರಾಯೋಜಿತ ಸುಮಾರು 18 ಸಾವಿರ ಕೋಟಿಯ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.