ADVERTISEMENT

ಸುಶಾಂತ್‌ ಪ್ರಕರಣದ ಸಿಬಿಐ ತನಿಖೆ ಕೋರಿದ್ದ ಸುಬ್ರಮಣಿಯನ್‌ ಪತ್ರ ಅಂಗೀಕರಿಸಿದ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜುಲೈ 2020, 15:44 IST
Last Updated 25 ಜುಲೈ 2020, 15:44 IST
   

ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ಸಿಬಿಐ ತನಿಖೆ ಕೋರಿ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಬರೆದ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಸ್ವೀಕರಿಸಿದ್ದಾರೆ.

ಈ ಕುರಿತು ಸುಬ್ರಮಣಿಯನ್‌ ಸ್ವಾಮಿ ಅವರಿಗೆ ಪತ್ರ ಬರೆದಿರುವ ಮೋದಿ ‘ ಜುಲೈ 15ರಂದು ನೀವು ಬರೆದ ಪತ್ರ ನನ್ನ ಕೈ ಸೇರಿದೆ,’ ಎಂದು ಪತ್ರದ ಮೂಲಕ ತಿಳಿಸಿದ್ದಾರೆ.

ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಅಸ್ವಾಭಾವಿಕ ಸಾವಿನ ಬಗ್ಗೆ ಸಿಬಿಐ ತನಿಖೆ ಬಯಸುವವರು ಪ್ರಧಾನಿ ಮೋದಿ ಅವರಿಗೆ ನನ್ನಂತೆಯೇ ಪತ್ರ ಬರೆಯಬೇಕು ಎಂದು ಅವರ ಕ್ಷೇತ್ರದ ಸಂಸದರನ್ನು ಒತ್ತಾಯಿಸಬೇಕು ಎಂದು ಟ್ವೀಟ್‌ ಮಾಡಿದ್ದರು.

ADVERTISEMENT

ಬಿಹಾರ ಮೂಲದ ಸುಶಾಂತ್‌ ಸಿಂಗ್‌ ರಜಪೂತ್‌ ಅವರು ಜೂನ್‌ 14ರಂದು ಮುಂಬೈನ್‌ ತಮ್ಮ ಫ್ಲ್ಯಾಟ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಅವರ ಸಾವು ಅಸಹಜ ಎಂಬ ವಾದಗಳು ಅಂದಿನಿಂದಲೂ ಕೇಳಿ ಬರುತ್ತಿವೆ.

ಇಷ್ಟೇ ಅಲ್ಲದೆ, ಸುಶಾಂತ್‌ ಆತ್ಮಹತ್ಯೆ ನಂತರ ಬಾಲಿವುಡ್‌ನಲ್ಲಿ ಸ್ವಜನ ಪಕ್ಷಪಾತದ ಕುರಿತು ಭಾರಿ ಚರ್ಚೆಗಳಾಗಿವೆ.

ಈ ಮಧ್ಯೆ ಸುಶಾಂತ್‌ ಸಿಂಗ್‌ ರಜಪೂತ್‌ ಅವರ ಕೊನೇ ಸಿನಿಮಾ ದಿಲ್‌ ಬೇಚಾರ ಬಿಡುಗಡೆಯಾಗಿದ್ದು, ಚಿತ್ರಕ್ಕೆ ಉತ್ತಮ ಸ್ಪಂದನೆ ದೊರೆತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.