ADVERTISEMENT

ಭಾರತ–ಚೀನಾ ಗಡಿ ವಿವಾದದ ಬಗ್ಗೆ ಸುಳ್ಳು ಹೇಳುತ್ತಿರುವ ಮೋದಿ, ಶಾ: ಸುಬ್ರಮಣಿಯನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಸೆಪ್ಟೆಂಬರ್ 2024, 6:25 IST
Last Updated 19 ಸೆಪ್ಟೆಂಬರ್ 2024, 6:25 IST
<div class="paragraphs"><p>ಸುಬ್ರಮಣಿಯನ್ ಸ್ವಾಮಿ</p></div>

ಸುಬ್ರಮಣಿಯನ್ ಸ್ವಾಮಿ

   

(ಪಿಟಿಐ ಚಿತ್ರ)

ನವದೆಹಲಿ: ‘ಭಾರತ–ಚೀನಾ ಗಡಿ ವಿವಾದದ ಬಗ್ಗೆ ಸುಳ್ಳು ಹೇಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ದೇಶದ್ರೋಹಕ್ಕೆ ಗುರಿಯಾಗುತ್ತಾರೆ’ ಎಂದು ಬಿಜೆಪಿ ನಾಯಕ ಮತ್ತು ಮಾಜಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಕಿಡಿಕಾರಿದ್ದಾರೆ.

ADVERTISEMENT

ಈ ಕುರಿತಂತೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘2020ರ ಏಪ್ರಿಲ್‌ನಿಂದ ಚೀನಾ 4,046 ಚದರ ಕಿಲೋ ಮೀಟರ್ ವಿವಾದಿತ ಲಡಾಖ್ ಪ್ರದೇಶವನ್ನು ವಶಪಡಿಸಿಕೊಂಡಿದೆ. ಆದರೆ, ಈ ಜೋಡಿ ಮಾತ್ರ ‘ಯಾರೂ ಬಂದಿಲ್ಲ’ ಎಂಬ ಸುಳ್ಳನ್ನೇ ಹೇಳಿಕೊಂಡು ಬಂದಿದೆ’ ಎಂದು ಹೇಳಿದರು.

‘ಭಾರತ–ಚೀನಾ ಗಡಿ ವಿವಾದ ಸಂಬಂಧ ಸತ್ಯ ಹೊರಬಿದ್ದರೆ ತಾವು ದೇಶದ್ರೋಹ ಆರೋಪಕ್ಕೆ ಗುರಿಯಾಗುತ್ತೇವೆ ಎಂಬುದು ಅವರಿಗೆ (ಮೋದಿ ಮತ್ತು ಅಮಿತ್‌ ಶಾ) ತಿಳಿದಿರಲಿ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.