ಭುವನೇಶ್ವರ: ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ನವದೆಹಲಿಯ ಕೆಂಪು ಕೋಟೆಯಲ್ಲಿ ರಚಿಸಿರುವ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮರಳು ಕಲಾಕೃತಿ ಕುರಿತಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಪರಾಕ್ರಮ ದಿನದ ಅಂಗವಾಗಿ ಕೆಂಪು ಕೋಟೆಯಲ್ಲಿ ನಾನು ರಚಿಸಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮರಳು ಕಲಾಕೃತಿಯನ್ನು ವೀಕ್ಷಿಸಿದ ಪ್ರಧಾನಿ ಮೋದಿ, ಮೆಚ್ಚುಗೆ ವ್ಯಕ್ತಪಡಿಸಿದರು. ಅದು ನನಗೆ ಸಿಕ್ಕ ಅತ್ಯುನ್ನತ ಗೌರವ’ಎಂದು ಒಡಿಶಾ ಮೂಲದ ಕಲಾವಿದ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ನೇತಾಜಿ ಅವರ 127ನೇ ಜನ್ಮ ಜಯಂತಿ ಅಂಗವಾಗಿ ಆಚರಿಸಲಾದ ಪರಾಕ್ರಮ ದಿವಸದ ಹಿನ್ನೆಲೆಯಲ್ಲಿ ಪಟ್ನಾಯಕ್ ಮರಳು ಕಲಾಕೃತಿ ನಿರ್ಮಿಸಿದ್ದರು.
7 ಅಡಿ ಎತ್ತರದ ಈ ಕಲಾಕೃತಿಗೆ 8 ಟನ್ ಮರಳು, 500 ಸ್ಟೀಲ್ ಬಟ್ಟಲುಗಳನ್ನು ಬಳಸಲಾಗಿದೆ ಎಂದು ಅವರು ಹೇಳಿದರು.
ಪ್ರಧಾನಿಯವರನ್ನು ಭೇಟಿಯಾಗಿದ್ದು ಮತ್ತು ಪ್ರಶಂಸೆ ಸಿಕ್ಕಿದ್ದು ಅಪೂರ್ವ ಕ್ಷಣವಾಗಿದೆ ಎಂದು ಪಟ್ನಾಯಕ್ ಹೇಳಿದ್ದಾರೆ.
ನಾವು ಬೇಟಿಯಾದಾಗ ‘ಜೈ ಜಗನ್ನಾಥ’ಎಂದು ಮೋದಿ ಹೇಳಿದರು ಎಂಬುದಾಗಿ ಕಲಾವಿದ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.