ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಒಳಗೊಂಡಿರುವ ಡಿಸ್ಕವರಿ ಚಾನೆಲ್‌ನ ಸಾಹಸಮಯ ಕಾರ್ಯಕ್ರಮ ‘ಮ್ಯಾನ್ ವರ್ಸಸ್ ವೈಲ್ಡ್’ನವಿಶೇಷ ಸಂಚಿಕೆ ಇಂದು ರಾತ್ರಿ 9 ಗಂಟೆಗೆ ಡಿಸ್ಕವರಿ ಚಾನೆಲ್‌ನಲ್ಲಿ ಪ್ರಸಾರವಾಗಲಿದೆ. ವಿಶೇಷವೆಂದರೆ ಬಹುನಿರೀಕ್ಷೆಯ ಈ ಕಾರ್ಯಕ್ರಮ ಕನ್ನಡ ಅವೃತ್ತಿಯಲ್ಲೂ ಲಭ್ಯವಾಗುತ್ತಿದೆ.
ಮೋದಿ ಅವರ ಈ ಕಾರ್ಯಕ್ರಮ ಕನ್ನಡದಲ್ಲೂ ಸಿಗಬಹುದೇ ಎಂದು ಕುಂದಾಪುರ ಮೂಲದ ಕಿರಣ್ ಎಂಬುವವರು ಟ್ವಿಟರ್‌ನಲ್ಲಿ ಕೇಳಿದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಡಿಸ್ಕವರಿ ನೆಟ್‌ವರ್ಕ್‌ನ ದಕ್ಷಿಣ ಏಷ್ಯಾದ ಎಂಡಿ ಮೇಘಾ ಟಾಟಾ ಹೌದು ಎಂದಿದ್ದಾರೆ.
‘ಡಿಸ್ಕವರಿ ಚಾನೆಲ್’ನ ಕನ್ನಡ ಅವತರಣಿಕೆ ಇಂದಿನಿಂದ ಆರಂಭವಾಗುತ್ತಿದೆ. ಇದೇ ದಿನವೇ ಮೋದಿ ಅವರ ಕಾರ್ಯಕ್ರಮವೂ ಪ್ರಸಾರವಾಗುತ್ತಿದೆ.
ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಈ ಕಾರ್ಯಕ್ರಮವನ್ನು ಚಿತ್ರೀಕರಿಸಲಾಗಿದೆ. 180 ದೇಶಗಳಲ್ಲಿ ಕಾರ್ಯಕ್ರಮ ಇಂದು ಪ್ರಸಾರವಾಗುತ್ತಿದೆ.
ಬೇರ್ ಗ್ರಿಲ್ಸ್ ಅವರ ನಿರೂಪಣೆಯಿಂದ ಪ್ರಸಿದ್ಧಿ ಪಡೆದಿರುವ ಈ ಕಾರ್ಯಕ್ರಮ, ಪರಿಚಯವೇ ಇಲ್ಲದ ಕಾಡಿನಲ್ಲಿ ವ್ಯಕ್ತಿಯೊಬ್ಬ ಒಂಟಿಯಾಗಿ ಸಂಚರಿಸುತ್ತ, ಸಂಕಷ್ಟಗಳನ್ನು ದಾಟಿ, ಬದುಕಬಹುದಾದ ಸಾಧ್ಯತೆಗಳನ್ನು ತೋರಿಸಿಕೊಡುತ್ತದೆ. ಈ ಕಾರ್ಯಕ್ರಮಕ್ಕೆ ಜಗತ್ತಿನಾದ್ಯಂತ ಅಸಂಖ್ಯ ಅಭಿಮಾನಿ ವೀಕ್ಷಕರಿದ್ದಾರೆ.
ಇನ್ನು ಮೋದಿ ಅವರ ಈ ಕಾರ್ಯಕ್ರಮ ವಿವಾದಗಳಿಂದೇನೂ ಹೊರತಾಗಿಲ್ಲ. ಈ ಸಂಚಿಕೆಯನ್ನು ಚಿತ್ರೀಕರಿಸಿದ್ದು ಪುಲ್ವಾಮಾ ದಾಳಿಯ ವೇಳೆಯಲ್ಲಿ ಎಂಬ ವಾದವಿದೆ. ಹೀಗಾಗಿ ಈ ಕಾರ್ಯಕ್ರಮ ತೀವ್ರ ಚರ್ಚೆಗೆ ಗುರಿಯಾಗಿತ್ತು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.