ADVERTISEMENT

NDA ಮೈತ್ರಿಕೂಟ 100 ದಿನ ಪೂರೈಕೆ | ಉತ್ತಮ ಆಡಳಿತ ನೀಡಲು ಸಚಿವರಿಗೆ ಪ್ರಧಾನಿ ಸಲಹೆ

ಪಿಟಿಐ
Published 10 ಅಕ್ಟೋಬರ್ 2024, 5:00 IST
Last Updated 10 ಅಕ್ಟೋಬರ್ 2024, 5:00 IST
<div class="paragraphs"><p>ಪ್ರಧಾನಿ ನರೇಂದ್ರ ಮೋದಿ</p></div>

ಪ್ರಧಾನಿ ನರೇಂದ್ರ ಮೋದಿ

   

ಪಿಟಿಐ

ನವದೆಹಲಿ: ಜನರಿಗೆ ಉತ್ತಮ ಆಡಳಿತ ನೀಡುವತ್ತ ಗಮನಹರಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಚಿವರಿಗೆ ಸೂಚಿಸಿದ್ದಾರೆ.

ADVERTISEMENT

ಎನ್‌ಡಿಎ ಮೈತ್ರಿಕೂಟ ನೂರು ದಿನ ಪೂರೈಸಿದ ಬಳಿಕ ಮೊದಲ ಬಾರಿಗೆ ಸಚಿವ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಮಾಡಲು ಎಲ್ಲರೂ ಅವಿರತವಾಗಿ ಶ್ರಮಿಸಬೇಕು. ರಾಜಕೀಯ ಕ್ಷೇತ್ರವು ದೇಶ ಸೇವೆಗಾಗಿಯೇ ಹೊರತು ಅಧಿಕಾರದ ಅಸ್ತ್ರವಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವತ್ತ ಕೈಗೊಳ್ಳಬೇಕಾದ ಪ್ರಮುಖ ನಿರ್ಣಯಗಳ ಬಗ್ಗೆಯೂ ಚರ್ಚಿಸಲಾಯಿತು ಎಂದು ಮೂಲಗಳು ತಿಳಿಸಿವೆ.

ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸಾಧಿಸಿದ ಗೆಲುವನ್ನು ಉಲ್ಲೇಖಿಸಿದ ಮೋದಿ, ಜನರಿಗೆ ಉತ್ತಮ ಆಡಳಿತ ಒದಗಿಸಬೇಕು. ಎಲ್ಲರನ್ನೂ ಒಳಗೊಳ್ಳುವ ಹಾಗೂ ಅಭಿವೃದ್ಧಿಪಥದತ್ತ ಮುನ್ನಡೆಯಲು ಉತ್ತಮ ಆಡಳಿತ ಅಗತ್ಯ ಎಂದು ಮೋದಿ ಹೇಳಿದ್ದಾರೆ.

ಸಾಮಾನ್ಯ ಜನರ ಸಂಕಷ್ಟಗಳಿಗೆ ಸಚಿವರು ಸ್ಪಂದಿಸಬೇಕು ಮತ್ತು ಅದೇ ಧ್ಯೇಯವಾಗಿರಬೇಕು ಎಂದು ಮೋದಿ ಒತ್ತಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.