ನವದೆಹಲಿ: ಸಾಂಪ್ರದಾಯಿಕ 'ಗಾರ್ಬಾ' ನೃತ್ಯ ಯುನೆಸ್ಕೊ ಪಟ್ಟಿ ಸೇರಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಜನರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಗಾರ್ಬಾ ನೃತ್ಯವನ್ನು 'ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ (ಐಸಿಎಚ್)' ಎಂದು ಗುರುತಿಸಿ ಯುನೆಸ್ಕೊ ಪ್ರಾತಿನಿಧಿಕ ಪಟ್ಟಿಗೆ ಸೇರಿಸಲಾಗಿದೆ.
ಗಾರ್ಬಾ ನೃತ್ಯ...
ಗಾರ್ಬಾ ನೃತ್ಯ ಸಾಂಪ್ರದಾಯಿಕ ಮತ್ತು ದೈವೀಕ ನೃತ್ಯ. ದೇವಿಯ ಶಕ್ತಿಯನ್ನು ಪ್ರತಿನಿಧಿಸುವ ಈ ನೃತ್ಯವನ್ನು ನವರಾತ್ರಿ ಸಮಯದಲ್ಲಿ ಗುಜರಾತ್ ಸೇರಿದಂತೆ ದೇಶದ ಹಲವೆಡೆ ಮಾಡಲಾಗುತ್ತದೆ. ಹಳೆಯ ಪದ್ಧತಿ ಪ್ರಕಾರ ದೇವಿಯು ಗಾರ್ಬಾ ರೂಪದಲ್ಲಿ ಜೀವಂತವಾಗಿದ್ದಾರೆ ಎಂದು ಜನರು ನಂಬುತ್ತಾರೆ. ಸಾಂಪ್ರದಾಯಿಕ ಉಡುಗೆ ತೊಟ್ಟು ವೃತ್ತಾಕಾರವಾಗಿ ನೃತ್ಯ ಮಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.