ADVERTISEMENT

ಮೋದಿ ಸಮಾಜ ವಿಭಜಿಸುತ್ತಿದ್ದಾರೆ, ಅವರ ಜೊತೆ ಮೈತ್ರಿ ಇರುವವರ ಸಹವಾಸ ಮಾಡಲ್ಲ:ಪವಾರ್

ಪಿಟಿಐ
Published 15 ನವೆಂಬರ್ 2024, 11:07 IST
Last Updated 15 ನವೆಂಬರ್ 2024, 11:07 IST
<div class="paragraphs"><p>ಅಜಿತ್ ಪವಾರ್ ಮತ್ತು ಶರದ್ ಪವಾರ್</p></div>

ಅಜಿತ್ ಪವಾರ್ ಮತ್ತು ಶರದ್ ಪವಾರ್

   

ಪುಣೆ: ಪ್ರಧಾನಿ ನರೇಂದ್ರ ಮೋದಿಯವರು ಸಮಾಜವನ್ನು ವಿಭಜಿಸುತ್ತಿದ್ದಾರೆ ಎಂದು ಆರೋಪಿಸಿದ ಎನ್‌ಸಿಪಿ(ಎಸ್‌ಪಿ) ನಾಯಕ ಶರದ್ ಪವಾರ್, ಮೋದಿ ಮಾತುಗಳು ಮತ್ತು ಆಡಳಿತಾರೂಢ ಮೈತ್ರಿಕೂಟದ ಬಗ್ಗೆ ಜನರಿಗಿರುವ ಅಸಮಾಧಾನವು ಮಹಾ ವಿಕಾಸ್ ಅಘಾಡಿ(ಎಂವಿಎ) ಅಧಿಕಾರಕ್ಕೆ ಬರಲು ನೆರವಾಗುತ್ತದೆ ಎಂದಿದ್ದಾರೆ.

ತಮ್ಮ ಸೋದರಳಿಯ ಅಜಿತ್ ಪವಾರ್ ಅವರೊಂದಿಗೆ ಚುನಾವಣೋತ್ತರ ಮೈತ್ರಿ ಕುರಿತಂತೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಜೊತೆ ಮೈತ್ರಿ ಹೊಂದಿರುವ ಯಾವುದೇ ಪಕ್ಷದ ಸಹವಾಸ ಮಾಡಲ್ಲ ಎಂದಿದ್ದಾರೆ.

ADVERTISEMENT

ಲೋಕಸಭಾ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿರುವ ಮಹಾಯುತಿ ಮೈತ್ರಿಕೂಟವು, ನಗದು ವರ್ಗಾವಣೆ ಯೋಜನೆ ಸೇರಿದಂತೆ ಭಾರಿ ಪ್ರಮಾಣದ ಹಣದ ಬಲ ಬಳಸಿ ಮತದಾರರ ಮೇಲೆ ಪರಿಣಾಮ ಬೀರಲು ಯತ್ನಿಸುತ್ತಿದೆ. ಜನ ಅವರನ್ನು ತಿರಸ್ಕರಿಸಲಿದ್ದಾರೆ ಎಂದು ಪಿಟಿಐ ಸಂದರ್ಶನದಲ್ಲಿ ಹೇಳಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ‘ಬಾಟೆಂಗೆ ತೋ ಕಾಟೆಂಗೆ’ ಘೋಷ ವಾಕ್ಯದ ಬಗ್ಗೆ ಕಿಡಿಕಾರಿದ ಪವಾರ್. ಯೋಗಿ ಆದಿತ್ಯನಾಥ್ ಕೋಮು ಹೇಳಿಕೆಗಳಿಗೆ ಹೆಸರುವಾಸಿ. ಅವರಿಗೇಕೆ ಪ್ರಾಶಸ್ತ್ಯ ಕೊಡಬೇಕು. ಅವರ ಬಗ್ಗೆ ಒಂದು ವಾಕ್ಯ ಮಾತನಾಡಲೂ ಇಷ್ಟವಿಲ್ಲ. ಕೇಸರಿ ಬಟ್ಟೆ ಧರಿಸುವ ಈ ಜನ ಕೋಮುವಾದ ನಡೆಸುತ್ತಿದ್ದಾರೆ. ಅವರು ದೇಶಕ್ಕೆ ಅಪಚಾರ ಮಾಡುತ್ತಿದ್ದಾರೆ ಎಂದಿದ್ದಾರೆ.

ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಮೋದಿ ಪ್ರಚಾರ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಪವಾರ್, ಜಾತಿ ಹೆಸರಲ್ಲಿ ನಾವು ಸಮಾಜ ಒಡೆಯುತ್ತಿದ್ದೇವೆ ಎಂದು ಮೋದಿ ಹೇಳಿರುವುದು ಅಸಮಂಜಸ. ಅವರೇ ಸ್ವತಃ ಸಮಾಜ ಒಡೆಯುತ್ತಿದ್ದಾರೆ. ರಾಜಕೀಯ ಹಿತಾಸಕ್ತಿಗಾಗಿ ಕಳೆದ ಕೆಲ ದಿನಗಳಿಂದ ತಮ್ಮ ಭಾಷಣದಲ್ಲಿ ಮೋದಿ ಪ್ರಸ್ತಾಪಿಸುತ್ತಿರುವ ಸಂಗತಿಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.