ನವದೆಹಲಿ: 72ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಜಾಮ್‌ನಗರದ ವಿಶೇಷ ರುಮಾಲು ಧರಿಸಿ ಗಮನಸೆಳೆದರು. ಈ ಮೂಲಕ ಪ್ರಮುಖ ಕಾರ್ಯಕ್ರಮಗಳಲ್ಲಿ ವಿಭಿನ್ನ ರುಮಾಲುಗಳನ್ನು ಧರಿಸುವ ತಮ್ಮ ಸಂಪ್ರದಾಯ ಮುಂದುವರಿಸಿದರು.
‘ಹಲರಿ ಪಗಡಿ‘ (ರಾಜರುಮಾಲು) ಎಂದು ಹೇಳಲಾಗುವ ಇದು ಕೆಂಪು ಬಣ್ಣದ ವಸ್ತ್ರದಲ್ಲಿ ಹಳದಿ ಬಣ್ಣದ ಚುಕ್ಕೆಗಳ ವರ್ಣ ಸಂಯೋಜನೆಯನ್ನು ಹೊಂದಿದೆ. ಇದನ್ನು ಪ್ರಧಾನಿಗೆ ಜಾಮ್‌ನಗರದ ರಾಜಮನೆತನದವರು ಕೊಡುಗೆ ನೀಡಿದ್ದರು.
ಜಾಮ್‌ನಗರ ಕ್ಷೇತ್ರದ ಸಂಸದೆ ಪೂನಬೆನ್ ಅವರು ಈ ಕುರಿತು ಟ್ವೀಟ್ ಮಾಡಿದ್ದು, ರುಮಾಲು ಈ ಭಾಗದ ಶ್ರೀಮಂತ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಹೇಳಿದ್ದಾರೆ. ಜಾಮ್‌ನಗರ ಶ್ರೀಮಂತ ಸಂಸ್ಕೃತಿ ಹೊಂದಿದೆ. ಪ್ರಧಾನಿ ಈ ಭಾಗದ ರಾಜರುಮಾಲು ಧರಿಸಿದ್ದು ಹೆಮ್ಮೆಯ ಸಂಗತಿ ಎಂದು ಹೇಳಿದ್ದಾರೆ.
ಮೋದಿ ಅವರು ಈ ರುಮಾಲು ಹಾಗೂ ಸಾಂಪ್ರದಾಯಿಕ ಕುರ್ತಾ, ಪೈಜಾಮಾ ಮತ್ತು ಬೂದಿ ಬಣ್ಣದ ಜಾಕೆಟ್ ಹಾಗೂ ಮುಖಗವುಸು ಧರಿಸಿದ್ದರು. ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವ ಸಂದರ್ಭದಲ್ಲಿ ಭಿನ್ನ ಸ್ವರೂಪದ ರುಮಾಲು ಧರಿಸಲಿದ್ದು, ಈ ಮೂಲಕ ಗಮನಸೆಳೆಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.