ADVERTISEMENT

ದಕ್ಷಿಣ ಆಫ್ರಿಕಾ ಅಧ್ಯಕ್ಷರಿಗೆ ಭಾರತದ ಕಲಾಕೃತಿಯನ್ನು ಉಡುಗೊರೆ ನೀಡಿದ ಮೋದಿ

ಪಿಟಿಐ
Published 25 ಆಗಸ್ಟ್ 2023, 6:06 IST
Last Updated 25 ಆಗಸ್ಟ್ 2023, 6:06 IST
   

ನವದೆಹಲಿ: ದಕ್ಷಿಣ ಆಫ್ರಿಕಾ ಅಧ್ಯಕ್ಷ  ಸಿರಿಲ್‌ ರಾಮಫೋಸಾ ಅವರಿಗೆ ಭಾರತೀಯ ಪರಂಪರೆಯನ್ನು ಪ್ರತಿಬಿಂಬಿಸುವ ಸಾಂಪ್ರದಾಯಿಕ ವಸ್ತುಗಳು ಮತ್ತು ಕಲಾಕೃತಿಗಳನ್ನು ಪ್ರಧಾನಿ ನರೇಂದ್ರ ಮೋದಿಯವರು ಉಡುಗೊರೆಯಾಗಿ ನೀಡಿದ್ದಾರೆ.

ರಾಮಾಫೊಸಾ ಅವರಿಗೆ ತೆಲಂಗಾಣದಲ್ಲಿ ತಯಾರಾದ ‘ಸುರಾಹಿ’ಯನ್ನು ಮತ್ತು ಅವರ ಪತ್ನಿಗೆ ನಾಗಾಲ್ಯಾಂಡ್‌ನ ವಿಶೇಷವಾದ ಶಾಲನ್ನು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೊತೆಗೆ ಕರ್ನಾಟಕದ ಬೀದರ್‌ನಲ್ಲಿ ತಯಾರಾಗುವ ಸತು, ತಾಮ್ರ ಮತ್ತು ಇತರ ನಾನ್-ಫೆರಸ್ ಮಿಶ್ರಲೋಹಗಳಿಂದ ತಯಾರಾದ ‘ಬಿದ್ರಿ ಹೂದಾನಿ’ಯನ್ನು ನೀಡಿದ್ದಾರೆ. ಇದಕ್ಕೆ ಸರಿಸುಮಾರು 500 ವರ್ಷಗಳಷ್ಟು ಇತಿಹಾಸವಿದೆ.

ADVERTISEMENT

ಅಲ್ಲದೆ ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡಾ ಸಿಲ್ವಾ ಅವರಿಗೆ ಮಧ್ಯಪ್ರದೇಶದಿಂದ ಗಾಂಡ್ ಸಮುದಾಯದ ಚಿತ್ರಕಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.