ADVERTISEMENT

ಬಿಜೆಪಿ ಆಡಳಿತದ ರಾಜ್ಯಗಳ ಸಿಎಂಗಳ ಜತೆ ಪ್ರಧಾನಿ ನರೇಂದ್ರ ಮೋದಿ ಸಭೆ

ಪಿಟಿಐ
Published 27 ಜುಲೈ 2024, 13:50 IST
Last Updated 27 ಜುಲೈ 2024, 13:50 IST
<div class="paragraphs"><p>ನರೇಂದ್ರ ಮೋದಿ</p></div>

ನರೇಂದ್ರ ಮೋದಿ

   

(ಪಿಟಿಐ ಚಿತ್ರ)

ನವದೆಹಲಿ: ಬಿಜೆಪಿ ಆಡಳಿತವಿರುದ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶನಿವಾರ) ಸಭೆ ನಡೆಸಿದ್ದಾರೆ.

ADVERTISEMENT

ಸಭೆಯಲ್ಲಿ ಹಲವಾರು ವಿಷಯಗಳ ಕುರಿತು ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಲೋಕಸಭೆ ಚುನಾವಣೆಯ ಫಲಿತಾಂಶ ಹಾಗೂ ಕೇಂದ್ರ ಬಜೆಟ್ ಬಳಿಕ ನಡೆದ ಬಿಜೆಪಿ ಸಿಎಂಗಳ ಮೊದಲ ಸಭೆ ಇದಾಗಿದೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ (ಉತ್ತರ ಪ್ರದೇಶ), ಹಿಮಂತ ಬಿಸ್ವ ಶರ್ಮಾ (ಅಸ್ಸಾಂ), ಭಜನ್‌ಲಾಲ್ ಶರ್ಮಾ (ರಾಜಸ್ಥಾನ) ಮತ್ತು ಮೋಹನ್ ಚರಣ್ ಮಾಝಿ (ಒಡಿಶಾ) ಉಪಸ್ಥಿತರಿದ್ದರು.

ಮಧ್ಯಪ್ರದೇಶ, ಉತ್ತರಾಖಂಡ, ಅರುಣಾಚಲ ಪ್ರದೇಶ, ಗೋವಾ, ಹರಿಯಾಣ, ಮಣಿಪುರ, ಛತ್ತೀಸಗಢದ ಮುಖ್ಯಮಂತ್ರಿಗಳು ಸಹ ಭಾಗವಹಿಸಿದ್ದರು.

'ಮುಖ್ಯಮಂತ್ರಿ ಪರಿಷತ್' ಸಭೆಯನ್ನು ಬಿಜೆಪಿ ಆಯೋಜಿಸಿದೆ. ಕೇಂದ್ರ ಹಾಗೂ ರಾಜ್ಯಗಳ ನಡುವಣ ಸಮನ್ವಯ ಹಾಗೂ ಉತ್ತಮ ಆಡಳಿತ ಕಾರ್ಯಸೂಚಿಯ ಭಾಗವಾಗಿ ನಿಯಮಿತವಾಗಿ ಸಭೆಯನ್ನು ಆಯೋಜಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಭಾನುವಾರವೂ ಸಭೆ ಮುಂದುವರಿಯಲಿದ್ದು, ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಕಳಪೆ ಸಾಧನೆ ಕುರಿತು ಸಭೆಯಲ್ಲಿ ಪರಾಮರ್ಶೆ ನಡೆಸುವ ಸಾಧ್ಯತೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.