ADVERTISEMENT

ಲಡಾಖ್‌ನಲ್ಲಿ ಪ್ರಧಾನಿ ಮೋದಿ: ರಕ್ಷಣಾ ಪಡೆ ಮುಖ್ಯಸ್ಥರಿಂದ ಪರಿಸ್ಥಿತಿ ವಿವರಣೆ

ಏಜೆನ್ಸೀಸ್
Published 3 ಜುಲೈ 2020, 6:16 IST
Last Updated 3 ಜುಲೈ 2020, 6:16 IST
ಲಡಾಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ
ಲಡಾಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಲಡಾಖ್‌ ಭೇಟಿ ನೀಡಿದ್ದಾರೆ. ಗಾಲ್ವಾನ್‌ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ನಡುವೆ ಸಂಘರ್ಷ ನಡೆದು ಎರಡು ವಾರಗಳ ಬಳಿಕ ಲಡಾಕ್‌ನಲ್ಲಿ ಪರಿಸ್ಥಿತಿ ಪರಿಶೀಲನೆ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಮತ್ತು ಸೇನಾ ಮುಖ್ಯಸ್ಥ ಜನರಲ್‌ ಎಂ.ಎಂ.ನರವಣೆ ನಿಮ್ಮೊ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.

ಭಾರತೀಯ ವಾಯು ಪಡೆ, ಸೇನೆ ಹಾಗೂ ಇಂಡೊ–ಟಿಬೆಟನ್‌ ಗಡಿ ಪೊಲೀಸ್‌ (ಐಟಿಬಿಪಿ) ಸಿಬ್ಬಂದಿಯೊಂದಿಗೆ ಪ್ರಧಾನಿ ಮಾತುಕತೆ ನಡೆಸಿದ್ದಾರೆ. ಸಿಂಧು ನದಿ ತೀರ ಹಾಗೂ ಝಂಸ್ಕಾರ್‌ ಪರ್ವತ ಶ್ರೇಣಿಯಿಂದ ಸುತ್ತವರಿದಿರುವ ನಿಮ್ಮೊ ಪ್ರದೇಶ 11,000 ಅಡಿ ಎತ್ತರದಲ್ಲಿದೆ.

ADVERTISEMENT

ಜೂನ್‌ 15ರಂದು ಗಾಲ್ವಾನ್ ಕಣಿವೆಯ ಭಾರತ–ಚೀನಾ ಸಂಘರ್ಷದಲ್ಲಿ ದೇಶದ 20 ಯೋಧರು ಸಾವಿಗೀಡಾದರು.

ಪೂರ್ವ ಲಡಾಖ್‌ವಲಯದಲ್ಲಿ ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿಯ (ಪಿಎಲ್‌ಎ) ಯಾವುದೇ ಆಕ್ರಮಣವನ್ನು ಎದುರಿಸಲು ದೇಶದ ಭದ್ರತಾ ಪಡೆಗಳ ಸಿದ್ಧತೆಯನ್ನು ಜನರಲ್‌ ಬಿಪಿನ್‌ ರಾವತ್‌ ಪರಿಶೀಲಿಸುತ್ತಿದ್ದಾರೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಲಡಾಖ್‌ ಪಶ್ಚಿಮ ವಲಯಕ್ಕೆ ಭೇಟಿ ನೀಡುವ ಸಾಧ್ಯತೆ ಇರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.