ADVERTISEMENT

ಕೊಲ್ಲಂ ಬೈಪಾಸ್ ಉದ್ಘಾಟಿಸಿದ ಪ್ರಧಾನಿ ; ಮೋದಿ ಮಾತಿಗೆ ತಿರುಗೇಟು ನೀಡಿದ ಪಿಣರಾಯಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2019, 12:50 IST
Last Updated 15 ಜನವರಿ 2019, 12:50 IST
ಕೇರಳದಲ್ಲಿ ಪ್ರಧಾನಿ ನರೇಂದ್ರ ಮೋದಿ
ಕೇರಳದಲ್ಲಿ ಪ್ರಧಾನಿ ನರೇಂದ್ರ ಮೋದಿ   

ಕೊಲ್ಲಂ: ಕೊಲ್ಲಂ ಬೈಪಾಸ್ ಉದ್ಘಾಟನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆ ಕೇರಳ ರಾಜ್ಯ ಸರ್ಕಾರದ ಸಂಪೂರ್ಣ ಬೆಂಬಲ ಇತ್ತು ಎಂದು ಹೇಳಿದ್ದಾರೆ.

ಯೋಜನೆ ಪೂರ್ಣಗೊಳಿಸುವುದಕ್ಕೆ ವಿಳಂಬ ಮಾಡಿ ಸಾರ್ವಜನಿಕರ ಹಣವನ್ನು ಪೋಲು ಮಾಡಬಾರದು. ಕೇರಳದ ಪುನರ್ ನಿರ್ಮಾಣಕ್ಕೆ ತ್ವರಿತ ಗತಿಯಲ್ಲಿ ಕಾರ್ಯಗಳನ್ನು ಮಾಡಬೇಕಿದೆ.ರಸ್ತೆ ಜೊತೆಗೆ ರೈಲ್ವೆ, ಜಲ ಸಂಚಾರಕ್ಕೂ ಕೇಂದ್ರ ಸರ್ಕಾರ ಪ್ರಾಧಾನ್ಯತೆ ನೀಡುತ್ತದೆ.ಕಳೆದ ನಾಲ್ಕು ವರ್ಷಗಳಲ್ಲಿ ಈ ವಲಯದಲ್ಲಿ ಹೆಚ್ಚಿನ ಅಭಿವೃದ್ದಿ ಸಾಧಿಸುವುದಕ್ಕೆ ಸಾಧ್ಯವಾಗಿದೆ.ದೇಶದ ಎಲ್ಲರ ಅಭಿವೃದ್ಧಿಯೇ ಕೇಂದ್ರ ಸರ್ಕಾರದ ಗುರಿ. ಕೊಲ್ಲಂ ಮತ್ತು ಕೇರಳದ ಜನತೆಯ ಈ ಪ್ರೀತಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ ಪ್ರಧಾನಿ.

ಅದೇ ವೇಳೆ ಕೇರಳದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದು ಪ್ರಧಾನಿ ಹೇಳಿದ್ದು ತಪ್ಪುಎಂದು ಅಧ್ಯಕ್ಷ ಭಾಷಣ ಮಾಡಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಕೊಲ್ಲಂ ಬೈಪಾಸ್ ಮತ್ತು GAIL ಪೈಪ್‍ಲೈನ್ ಇವೆರಡು ಕೇರಳದ ಅಭಿವೃದ್ಧಿ ಯೋಜನೆಗೆ ಸಾಕ್ಷಿ ಎಂದಿದ್ದಾರೆ ಪಿಣರಾಯಿ.ಅಧ್ಯಕ್ಷ ಭಾಷಣದ ನಡುವೆ ಕೆಲವರು ಶರಣಂ ಕೂಗಿ ಪ್ರತಿಭಟನೆ ವ್ಯಕ್ತ ಪಡಿಸಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿದ ಪಿಣರಾಯಿ, ಈ ವೇದಿಕೆಯಲ್ಲಿಏನು ಬೇಕಾದರು ಹೇಳಬಹುದು, ಮಾಡಬಹುದು ಎಂದು ಅಂದುಕೊಳ್ಳಬೇಡಿ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಮಂಗಳವಾರ ಸಂಜೆ 4 ಗಂಟೆಗೆ ತಿರುವನಂತಪುರಂ ವಾಯುಸೇನಾ ಟೆಕ್ನಿಕಲ್ ಏರಿಯಾದಲ್ಲಿ ವಿಮಾನದಲ್ಲಿ ಬಂದಿಳಿದ ಪ್ರಧಾನಿ ಹೆಲಿಕಾಪ್ಟರ್ ಮೂಲಕ ಕೊಲ್ಲಂಗೆ ಆಗಮಿಸಿದ್ದರು.ತಿರುವನಂತಪುರಂನಲ್ಲಿ ರಾಜ್ಯಪಾಲಪಿ. ಸದಾಶಿವಂ, ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಕೇಂದ್ರ ಸಚಿವ ಅಲ್ಫೋನ್ಸ್ ಕಣ್ಣಂತ್ತಾನಂ ಮೊದಲಾದವರು ಪ್ರಧಾನಿಗೆ ಸ್ವಾಗತ ಕೋರಿದ್ದಾರೆ.

ಮೇವರಂನಿಂದ ಕಾವನಾಡ್ ಅಲ್ತರಮ್ಮೂಡ್ ವರೆಗೆ 13.14 ಕಿಮೀ ಉದ್ದದ ಬೈಪಾಸ್ ಆಗಿದೆ ಇದು. 1972ರಲ್ಲಿ ಆರಂಭವಾದ ಈ ಯೋಜನೆಯ ಮೂರನೇ ಹಂತವಾದಕಲ್ಲುಂತಾಳಂ- ಅಲ್ತರಮ್ಮೂಡ್ ಪುನರ್ ನಿರ್ಮಾಣ ಮಾಡಿ ಅಗಲ ಮಾಡಿದ ರಸ್ತೆಯನ್ನು ಪ್ರಧಾನ ಮಂತ್ರಿ ಉದ್ಘಾಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.