ನವದೆಹಲಿ: ಮೈಸೂರು ಹಾಗೂ ಗುಲ್ಬರ್ಗಾ ಸೇರಿದಂತೆ ದೇಶದ 129 ಜಿಲ್ಲೆಗಳಲ್ಲಿ ಸಾಂದ್ರೀಕೃತ ನೈಸರ್ಗಿಕ ಅನಿಲ (ಸಿಎನ್‌ಜಿ) ಪೂರೈಕೆ ಮಾಡುವ 10ನೇ ಹಂತದ ಕಾಮಗಾರಿ ಆರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಶಿಲಾನ್ಯಾಸ ನೆರವೇರಿಸಿದರು.
2–3 ವರ್ಷಗಳಲ್ಲಿ ಕರ್ನಾಟಕ ಸೇರಿದಂತೆ 18 ರಾಜ್ಯಗಳಲ್ಲಿ ಅಡುಗೆ ಮನೆಗಳಿಗೆ ಪೈಪ್ ಮೂಲಕ ಗ್ಯಾಸ್ ಪೂರೈಕೆ ಮಾಡಲಾಗುತ್ತದೆ.
10ನೇ ಹಂತ ಪೂರ್ಣಗೊಂಡ ಬಳಿಕ 400 ಜಿಲ್ಲೆಗಳಲ್ಲಿ ಇಂಧನವಾಗಿ ನೈಸರ್ಗಿಕ ಅನಿಲ ಬಳಸಿದಂತಾಗುತ್ತದೆ. ಇದು ದೇಶದ ಶೇ 70ಷ್ಟು ಜನರನ್ನು ಒಳಗೊಳ್ಳಲಿದೆ. ಪರಿಸರಸ್ನೇಹಿ ಸೈಸರ್ಗಿಕ ಅನಿಲ ಬಳಕೆಯು ವಾತಾವರಣಕ್ಕೆ ಇಂಗಾಲದ ಹೊರಸೂಸುವಿಕೆಯನ್ನು ನಿಯಂತ್ರಿಸುತ್ತದೆ.
ಅಂಕಿ–ಅಂಶ
2 ಕೋಟಿ ಜನ
10ನೇ ಹಂತದ ಕಾಮಗಾರಿ ಪೂರ್ಣಗೊಂಡ ಬಳಿಕ ಬಳಕೆದಾರರ ಸಂಖ್ಯೆ
32 ಲಕ್ಷ ಜನ
ಪ್ರಸ್ತುತ ಅಡುಗೆ ಇಂಧನವಾಗಿ ಸಿಎನ್‌ಜಿ ಬಳಸುತ್ತಿರುವವರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.