ADVERTISEMENT

ಸ್ವಾಮಿ ವಿವೇಕಾನಂದರ 122ನೇ ಪುಣ್ಯತಿಥಿ: ಮೋದಿ, ಮಮತಾ ನಮನ

ಪಿಟಿಐ
Published 4 ಜುಲೈ 2024, 7:26 IST
Last Updated 4 ಜುಲೈ 2024, 7:26 IST
<div class="paragraphs"><p>ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ&nbsp;ಹಾಗೂ ಪ್ರಧಾನಿ ನರೇಂದ್ರ ಮೋದಿ  </p></div>

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಪ್ರಧಾನಿ ನರೇಂದ್ರ ಮೋದಿ

   

ನವದೆಹಲಿ: ಸ್ವಾಮಿ ವಿವೇಕಾನಂದರ 122ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗೌರವ ನಮನ ಸಲ್ಲಿಸಿದ್ದಾರೆ.

ದೇಶದಲ್ಲಿ ಸಮೃದ್ಧ ಮತ್ತು ಪ್ರಗತಿಪರ ಸಮಾಜ ನಿರ್ಮಿಸುವ ತಮ್ಮ ಬದ್ಧತೆಯನ್ನು ಪುನರುಚ್ಛರಿಸುವುದಾಗಿ ಅವರು ಹೇಳಿದ್ದಾರೆ.

ADVERTISEMENT

ವಿವೇಕಾನಂದರ ಪುಣ್ಯತಿಥಿ ಹಿನ್ನೆಲೆಯಲ್ಲಿ ಅವರಿಗೆ ಗೌರವ ನಮನ ಸಲ್ಲಿಸುತ್ತೇನೆ. ಅವರ ಬೋಧನೆಗಳು ಲಕ್ಷಾಂತರ ಜನರಿಗೆ ಶಕ್ತಿಯನ್ನು ನೀಡಿವೆ. ಅವರ ಜಾಣ್ಮೆ ಮತ್ತು ನಿರಂತರ ಜ್ಞಾನದ ಅನ್ವೇಷಣೆ ಕೂಡ ಬಹಳ ಪ್ರೇರಕವಾಗಿದೆ ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಮೋದಿ ತಿಳಿಸಿದ್ದಾರೆ.

1902ರ ಜುಲೈ 04ರಂದು ಸ್ವಾಮಿ ವಿವೇಕಾನಂದ ನಿಧನರಾಗಿದ್ದರು. ವೇದಾಂತ ತತ್ವಶಾಸ್ತ್ರವನ್ನು ಪಾಶ್ಚಿಮಾತ್ಯ ದೆಶಗಳಲ್ಲಿ ಪ್ರಚಾರ ಮಾಡಿದ ಅವರು, ಬಡವರ ಸೇವೆಗಾಗಿ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದ್ದರು.

ವಿವೇಕಾನಂದರು ಒಬ್ಬ ದೊಡ್ಡ ದೇಶಭಕ್ತರಾಗಿದ್ದು, ನಮ್ಮ ಧರ್ಮ ಮತ್ತು ದೇಶವನ್ನು ಇಬ್ಭಾಗಿಸದೆ ಪ್ರೀತಿಸುವುದನ್ನು ಬೋಧಿಸಿದ್ದರು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.