ADVERTISEMENT

ಮಾಜಿ ಪ್ರಧಾನಿ ನರಸಿಂಹ ರಾವ್‌ ಜನ್ಮದಿನ: ಮೋದಿ, ಖರ್ಗೆ ಶುಭಾಶಯ

ಪಿಟಿಐ
Published 28 ಜೂನ್ 2024, 6:00 IST
Last Updated 28 ಜೂನ್ 2024, 6:00 IST
 ಮಾಜಿ ಪ್ರಧಾನಿ ದಿವಂಗತ ಪಿ.ವಿ.ನರಸಿಂಹ ರಾವ್‌
ಮಾಜಿ ಪ್ರಧಾನಿ ದಿವಂಗತ ಪಿ.ವಿ.ನರಸಿಂಹ ರಾವ್‌    

ನವದೆಹಲಿ: ಮಾಜಿ ಪ್ರಧಾನಿ ದಿವಗಂತ ಪಿ.ವಿ ನರಸಿಂಹ ರಾವ್‌ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ಮೋದಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಭಾಶಯ ಕೋರಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಎಕ್ಸ್‌ ಮಾಡಿರುವ ಅವರು, ಬುದ್ಧಿವಂತಿಕೆ ಮತ್ತು ರಾಜಕೀಯ ನಾಯಕತ್ವಕ್ಕಾಗಿ ಅವರನ್ನು ಸ್ಮರಿಸಲಾಗುತ್ತಿದೆ. ದೇಶಕ್ಕಾಗಿ ಅವರು ನೀಡಿದ ಕೊಡುಗೆಯನ್ನು ಗುರುತಿಸಿ ಅವರಿಗೆ ‘ಭಾರತ ರತ್ನ‘ ನೀಡಿರುವುದು ನಮ್ಮ ಸರ್ಕಾರದ ಗೌರವವಾಗಿದೆ ಎಂದು ಮೋದಿ ಹೇಳಿದ್ದಾರೆ.

ನರಸಿಂಹರಾವ್ ಅವರ ಆರ್ಥಿಕ ಉದಾರೀಕರಣ ನೀತಿ ದೇಶದ ಅಭಿವೃದ್ಧಿಯನ್ನು ಬೆಳಗಿಸಿತು, ಮಧ್ಯಮ ವರ್ಗವನ್ನು ಉನ್ನತೀಕರಿಸಿತು. ರಾಷ್ಟ್ರ ನಿರ್ಮಾಣಕ್ಕೆ ಅವರ ಅಪಾರ ಕೊಡುಗೆಯನ್ನು ನಾವೆಲ್ಲರೂ ಗೌರವಿಸುತ್ತೇವೆ ಎಂದು ಖರ್ಗೆ ಹೇಳಿದ್ದಾರೆ.

ADVERTISEMENT

ತೆಲಂಗಾಣದ ಲಕ್ನೆಪಲ್ಲಿ ಗ್ರಾಮದಲ್ಲಿ 1921 ಜೂನ್ 28ರಂದು ರಾವ್ ಜನಿಸಿದರು.

ಪಿ.ವಿ ನರಸಿಂಹ ರಾವ್‌ ಅವರು 1991 ರಿಂದ 1996 ರವರೆಗೆ ಪ್ರಧಾನಿಯಾಗಿ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದರು.

ರಾವ್ ಸರ್ಕಾರದಲ್ಲಿ, ಭಾರತದ ಆಗಿನ ಹಣಕಾಸು ಸಚಿವರಾಗಿದ್ದ ಮನಮೋಹನ್ ಸಿಂಗ್ ಅವರು 1991 ರಲ್ಲಿ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತಂದರು. ಆ ಸಂದರ್ಭದಲ್ಲಿ ಸಿಂಗ್‌ಗೆ ಸಂಪೂರ್ಣ ಸ್ವಾತಂತ್ರ್ಯವನ್ನು ರಾವ್‌ ನೀಡಿದ್ದರು.

2004 ಡಿಸೆಂಬರ್ 23 ರಂದು ಪಿ.ವಿ. ನರಸಿಂಹರಾವ್ ನಿಧನರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.