ನವದೆಹಲಿ: ಅಂತರರಾಷ್ಟ್ರೀಯ ಯೋಗ ದಿನಾಚರಣೆಯಇದರ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಯೋಗಾಸನದ ಅನಿಮೇಟೆಡ್ ವಿಡಿಯೊವೊಂದನ್ನು ಟ್ವೀಟ್ ಮಾಡಿದ್ದಾರೆ. ಈ ಅನಿಮೇಟೆಡ್ ವಿಡಿಯೊದಲ್ಲಿ ಮೋದಿ ತ್ರಿಕೋನಾಸನ ಮಾಡುವ ದೃಶ್ಯವಿದೆ.
ಜೂನ್ 21ಕ್ಕೆ ನಾವು ಯೋಗ ದಿನ ಆಚರಿಸಲಿದ್ದೇವೆ.ನೀವೆಲ್ಲರೂ ಯೋಗವನ್ನು ನಿಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡುವುದಲ್ಲದೆ ಇನ್ನೊಬ್ಬರಿಗೂ ಪ್ರೇರಣೆ ನೀಡಬೇಕು.ಯೋಗದಿಂದ ತುಂಬಾ ಲಾಭವಿದೆ. ತ್ರಿಕೋನಾಸನದ ಬಗ್ಗೆ ವಿಡಿಯೊ ಇಲ್ಲಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.