ADVERTISEMENT

ಹಿರಿಯ ವಕೀಲ ಫಾಲಿ ನರೀಮನ್ ನಿಧನಕ್ಕೆ ಮೋದಿ, ಖರ್ಗೆ, ರಾಹುಲ್ ಸಂತಾಪ

ಪಿಟಿಐ
Published 21 ಫೆಬ್ರುವರಿ 2024, 5:28 IST
Last Updated 21 ಫೆಬ್ರುವರಿ 2024, 5:28 IST
<div class="paragraphs"><p>ಹಿರಿಯ ವಕೀಲ ಫಾಲಿ ಎಸ್. ನರೀಮನ್‌</p></div>

ಹಿರಿಯ ವಕೀಲ ಫಾಲಿ ಎಸ್. ನರೀಮನ್‌

   

ನವದೆಹಲಿ: ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಫಾಲಿ ಎಸ್. ನರೀಮನ್‌ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ.

‘ದೇಶದ ಪ್ರಮುಖ ಕಾನೂನು ತಜ್ಞರಲ್ಲಿ ಫಾಲಿ ನರೀಮನ್ ಕೂಡ ಒಬ್ಬರು. ಸಾಮಾನ್ಯ ನಾಗರಿಕರಿಗೆ ನ್ಯಾಯ ಸಿಗುವಂತೆ ಮಾಡಲು ಅವರು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದರು’ ಎಂದು ಪ್ರಧಾನಿ ಮೋದಿ ‘ಎಕ್ಸ್‌’ನಲ್ಲಿ ಸಂತಾಪ ಸೂಚಿಸಿದ್ದಾರೆ.

ADVERTISEMENT

‘ಪದ್ಮ ವಿಭೂಷಣ ಪುರಸ್ಕೃತರಾದ ನರೀಮನ್‌ ಅವರು ತಮ್ಮ ತತ್ವ ಸಿದ್ದಾಂತಗಳಿಗೆ ಬದ್ದರಾಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಮಲ್ಲಿಕಾರ್ಜುನ ಖರ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

‘ಅವರು ವಾದಿಸಿರುವ ಪ್ರಕರಣಗಳು ಐತಿಹಾಸಿಕ ಹೆಗ್ಗುರುತಾಗಿರುವುದು ಮಾತ್ರವಲ್ಲದೇ ಸಂವಿಧಾನದ ಪಾವಿತ್ರ್ಯವನ್ನು ಎತ್ತಿಹಿಡಿಯಲು ಇಂದಿನ ಪೀಳಿಗೆಯ ವಕೀಲರಿಗೆ ಅಥವಾ ನ್ಯಾಯಾಧೀಶರಿಗೆ ಸ್ಪೂರ್ತಿ ಮತ್ತು ಪ್ರೇರಣೆ ನೀಡಿವೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.