ಮುಂಬೈ: ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಅವರು ಮುಂಬೈನ ಅಟಲ್ ಸೇತುವೆ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ವಿಡಿಯೊ ಹಂಚಿಕೊಂಡಿದ್ದರು. ಇದೀಗ ರಶ್ಮಿಕಾ ಅವರ ವಿಡಿಯೊವನ್ನು ಪ್ರಧಾನಿ ನರೇಂದ್ರ ಮೋದಿ ರೀಶೇರ್ ಮಾಡಿದ್ದಾರೆ.
ಎಕ್ಸ್‌ನಲ್ಲಿ ವಿಡಿಯೊ ಹಂಚಿಕೊಂಡಿರುವ ಮೋದಿ ‘ಜನರನ್ನು ಸಂಪರ್ಕಿಸುವುದು ಮತ್ತು ಅವರ ಜೀವನವನ್ನು ಸುಧಾರಿಸುವುದಕ್ಕಿಂತ ಹೆಚ್ಚು ತೃಪ್ತಿಕರವಾದದ್ದೇನೂ ಇಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.
ರಶ್ಮಿಕಾ ಮಂದಣ್ಣ ತಮ್ಮ ಎಕ್ಸ್ ಖಾತೆಯಲ್ಲಿ ಪ್ರಧಾನಿ ಮೋದಿಯವರು ಉದ್ಘಾಟಿಸಿದ ಅಟಲ್ ಬಿಹಾರಿ ವಾಜಪೇಯಿ ಶೆವಾರಿ-ನವ ಶೇವಾ ಅಟಲ್ ಸೇತುವೆ ಮೂಲಕ ಪ್ರಯಾಣಿಸಿದ ಅನುಭವದ ಬಗ್ಗೆ ಮಾತನಾಡಿರುವ ವೀಡಿಯೊವನ್ನು ಹಂಚಿಕೊಂಡಿದ್ದರು.
‘ಎರಡು ಗಂಟೆಗಳ ಪ್ರಯಾಣ ಈಗ 20 ನಿಮಿಷಗಳಲ್ಲಿ ಮುಗಿಯುತ್ತದೆ. ಇಂಥದ್ದೊಂದು ಸಾಧ್ಯವಿತ್ತು ಎಂದು ಯಾರು ಭಾವಿಸಿರಲಿಲ್ಲ. ಇಂದು ನವಿ ಮುಂಬೈನಿಂದ ಮುಂಬೈವರೆಗೆ, ಗೋವಾದಿಂದ ಮುಂಬೈವರೆಗೆ, ಬೆಂಗಳೂರಿನಿಂದ ಮುಂಬೈವರೆಗೆ ತುಂಬಾ ಸುಲಭವಾಗಿ ಮತ್ತು ಅದ್ಭುತ ಮೂಲಸೌಕರ್ಯಗಳೊಂದಿಗೆ ಪ್ರಯಾಣಿಸಬಹುದು. ಇದು ನನಗೆ ಹೆಮ್ಮೆ ತರುತ್ತದೆ’ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.
‘ಯುವ ಪೀಳಿಗೆ, ಯುವ ಭಾರತ, ವೇಗದಲ್ಲಿ ಬೆಳೆಯುತ್ತಿದೆ. ಭಾರತವು ಅತ್ಯಂತ ಬುದ್ಧಿವಂತ ದೇಶ. ಯುವ ಭಾರತೀಯರು ಮತ ಚಲಾಯಿಸಬೇಕು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.